ವಾಯುಪ್ರದೇಶವನ್ನು ಭಾಗಶಃ ಮರು ತೆರೆದ ಇರಾನ್: ವರದಿ

ಸಾಂದರ್ಭಿಕ ಚಿತ್ರ (PTI)
ಟೆಹರಾನ್, ಎ.18: ಇರಾನ್ ತನ್ನ ಭೂಪ್ರದೇಶದ ಪೂರ್ವ ಭಾಗವನ್ನು ದಾಟುವ ಅಂತರರಾಷ್ಟ್ರೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಶನಿವಾರ ಭಾಗಶಃ ಪುನಃ ತೆರೆದಿದೆ ಎಂದು ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ಮೂಲಕ ಸಾಗುವ ಅಂತರರಾಷ್ಟ್ರೀಯ ವಿಮಾನಗಳಿಗೆ ದೇಶದ ವಾಯುಪ್ರದೇಶದ ಪೂರ್ವವಿಭಾಗದಲ್ಲಿ ವಾಯು ಮಾರ್ಗಗಳು ತೆರೆದಿರುತ್ತವೆ. ಕೆಲವು ವಿಮಾನ ನಿಲ್ದಾಣಗಳನ್ನೂ ಮತ್ತೆ ತೆರೆಯಲಾಗಿದೆ ಎಂದು ವರದಿ ತಿಳಿಸಿದೆ.
Next Story




