ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಗೆ ಇರಾನ್ ಒತ್ತಾಯ

Photo credit: AP/PTI
ಟೆಹರಾನ್ : ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಅಮೆರಿಕ ನಡೆಸಿರುವ ದಾಳಿಯನ್ನು ಘೋರ ಕೃತ್ಯ, ಕಾನೂನುಬಾಹಿರ ಬಲಪ್ರಯೋಗ ಎಂದು ಬಣ್ಣಿಸಿದ ಇರಾನ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಗೆ ಒತ್ತಾಯಿಸಿದೆ.
ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾವನಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್ ಅಡಿಯಲ್ಲಿ ಅಮೆರಿಕವನ್ನು ಹೊಣೆಗಾರರನ್ನಾಗಿ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಅಮೆರಿಕದ ಈ ಅಪ್ರಚೋದಿತ ಮತ್ತು ಪೂರ್ವಯೋಜಿತ ಆಕ್ರಮಣಕಾರಿ ಕೃತ್ಯಗಳನ್ನು ಇಸ್ಲಾಮಿಕ್ ಗಣರಾಜ್ಯವಾಗಿರುವ ಇರಾನ್ ತೀವ್ರವಾಗಿ ಖಂಡಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರವಿವಾರ ಬೆಳಗಿನ ಜಾವ ಇರಾನಿನ ಪ್ರಮುಖ ಪರಮಾಣು ಸೌಲಭ್ಯಗಳಾದ ಫೋರ್ಡೋ, ನಟಾಂಝ್ ಮತ್ತು ಇಸ್ಫಹಾನ್ ಗುರಿಯಾಗಿಟ್ಟುಕೊಂಡು ಅಮೆರಿಕ ವೈಮಾನಿಕ ದಾಳಿ ನಡೆಸಿತ್ತು.
Next Story





