ಬಹ್ರೈನ್ನಲ್ಲಿನ ಅಮೆರಿಕ ವಾಯುನೆಲೆ ಮೇಲೆ ಇರಾನ್ ನಿಂದ ದಾಳಿ: ದೃಢಪಡಿಸಿದ IRGC

PC: screengrab/x.com/PressTV
ಮನಾಮಾ/ಟೆಹ್ರಾನ್, ಮಾ. 3: ಬಹ್ರೈನ್ನ ಶೇಖ್ ಈಸಾ ಪ್ರದೇಶದಲ್ಲಿರುವ ಅಮೆರಿಕದ ವಾಯುನೆಲೆಯನ್ನು ಗುರಿಯಾಗಿಸಿ ಬೃಹತ್ ಪ್ರಮಾಣದ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.
ಮಂಗಳವಾರ ಬೆಳಿಗ್ಗೆ 20 ಡ್ರೋನ್ಗಳು ಮತ್ತು ಮೂರು ಕ್ಷಿಪಣಿಗಳನ್ನು ಬಳಸಿಕೊಂಡು ದಾಳಿ ನಡೆಸಲಾಗಿದೆ ಎಂದು ಐಆರ್ಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ದಾಳಿಯಿಂದ ವಾಯುನೆಲೆಯ ಮುಖ್ಯ ಕಮಾಂಡ್ ಕೇಂದ್ರ ಹಾಗೂ ಪ್ರಧಾನ ಕಚೇರಿ ಕಟ್ಟಡ ಹಾನಿಗೊಳಗಾಗಿದ್ದು, ಇಂಧನ ಟ್ಯಾಂಕ್ ಗಳಿಗೆ ಬೆಂಕಿ ತಗುಲಿದೆಯೆಂದು ಅದು ಹೇಳಿದೆ ಎಂದು Aljazeera ವರದಿ ಮಾಡಿದೆ.
ಈ ಕುರಿತು ಬಹ್ರೈನ್ ಅಥವಾ ಅಮೆರಿಕ ಅಧಿಕಾರಿಗಳಿಂದ ತಕ್ಷಣದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತೀವ್ರವಾಗುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ಸಂಭವಿಸಿದೆ.
Next Story





