ಕುವೈತ್, ಜೋರ್ಡಾನ್ ನಲ್ಲಿನ ಅಮೆರಿಕದ ನೆಲೆಗಳ ಮೇಲೆ ಇರಾನ್ ದಾಳಿ

ಸಾಂದರ್ಭಿಕ ಚಿತ್ರ | Photo Credit : AP
ಟೆಹರಾನ್: ಅಮೆರಿಕದ ವೈಮಾನಿಕ ದಾಳಿಗೆ ಪ್ರತಿಯಾಗಿ ಇರಾನ್ ಗುರುವಾರ ಕುವೈತ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ.
ಇರಾನ್ನಾದ್ಯಂತ ಅಮೆರಿಕ ನಡೆಸಿದ ವ್ಯಾಪಕ ಬಾಂಬ್ ದಾಳಿಯಲ್ಲಿ ಕನಿಷ್ಠ 19 ಇರಾನ್ ನಾಗರಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಇದಕ್ಕೆ ಪ್ರತೀಕಾರವಾಗಿ ಕುವೈತ್, ಜೋರ್ಡಾನ್, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹರೈನ್ ಮತ್ತು ಇರಾಕ್ನ ಸ್ವಾಯತ್ತ ಕುರ್ದಿಸ್ತಾನ್ ಪ್ರದೇಶ ಸೇರಿದಂತೆ ಪಶ್ಚಿಮ ಏಶ್ಯಾದಾದ್ಯಂತ ಇರುವ ಅಮೆರಿಕದ ಮಿಲಿಟರಿ ಗುರಿಗಳ ಮೇಲೆ ಇರಾನ್ ದಾಳಿ ನಡೆಸಿದೆ.
ಇರಾನ್ನಿಂದ ಬಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತಡೆಯುತ್ತಿರುವುದಾಗಿ ಕುವೈತ್ ಸೇನೆ ಗುರುವಾರ ತಿಳಿಸಿದೆ. `ಇರಾನ್ ಜನರ ವಿರುದ್ಧ ಅಮೆರಿಕ ಎಸಗಿದ ಅಪರಾಧಗಳಿಗೆ ಸೂಕ್ತ ಉತ್ತರವಾಗಿ' ಗಲ್ಫ್ ರಾಷ್ಟ್ರದಲ್ಲಿರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇರಾನ್ನ ಸರಕಾರಿ ಸ್ವಾಮ್ಯದ ಟಿವಿ ಸ್ಪಷ್ಟಪಡಿಸಿದೆ.
Next Story




