ಅಮೆರಿಕದ ಸಮರನೌಕೆಯ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ; IRGC

ಸಾಂದರ್ಭಿಕ ಚಿತ್ರ | Photo Credit : AP
ಟೆಹ್ರಾನ್: ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ವಿಮಾನವಾಹಕ ಯುದ್ದನೌಕೆ ಯುಎಸ್ಎಸ್ ಅಬ್ರಹಾಂ ಲಿಂಕನ್ ಮೇಲೆ 4 ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿರುವುದಾಗಿ ಇರಾನ್ನ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(IRGC) ರವಿವಾರ ಹೇಳಿದೆ.
ಸಶಸ್ತ್ರ ಪಡೆಗಳು ಮಿಲಿಟರಿ ಸಂಘರ್ಷದ ಹೊಸ ಹಂತವನ್ನು ಪ್ರವೇಶಿಸಿದ್ದು ಭೂಮಿ ಮತ್ತು ನೆಲದಲ್ಲಿನ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು. ಭೂಮಿ ಮತ್ತು ಸಮುದ್ರವು ಭಯೋತ್ಪಾದಕ ಆಕ್ರಮಣಕಾರರಿಗೆ ಸ್ಮಶಾನವಾಗಲಿದೆ' ಎಂದು IRGC ಎಚ್ಚರಿಸಿದೆ. ಆದರೆ IRGC ಹೇಳಿಕೆಯನ್ನು ಅಮೆರಿಕ ಅಲ್ಲಗೆಲದಿದೆ.
Next Story




