ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ: ಜಿ7 ನಾಯಕರ ಜಂಟಿ ಹೇಳಿಕೆ

PC | Reuters
ಒಟ್ಟಾವ: ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ ಎಂದು ಜಿ7 ದೇಶಗಳ ನಾಯಕರು ಸಹಿ ಹಾಕಿರುವ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಉಲ್ಬಣಗೊಂಡಿರುವ ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಇಸ್ರೇಲ್ಗೆ ಸ್ವಯಂ ರಕ್ಷಣೆಯ ಹಕ್ಕು ಇದೆ ಎಂದೂ ಜಿ7 ನಾಯಕರು ಒತ್ತಿಹೇಳಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಹಗೆತನ ಮತ್ತಷ್ಟು ವ್ಯಾಪಕಗೊಳ್ಳಬಾರದು ಮತ್ತು ಗಾಝಾದಲ್ಲಿ ತಕ್ಷಣ ಕದನ ವಿರಾಮ ಏರ್ಪಡಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಗಿದೆ.
ಉದ್ವಿಗ್ನತೆ ಶಮನಕ್ಕೆ ಇಸ್ರೇಲ್ ಮತ್ತು ಇರಾನ್ ಆದ್ಯತೆ ನೀಡಬೇಕು ಮತ್ತು ಪ್ರಾದೇಶಿಕ ಸ್ಥಿರತೆಗೆ ಧಕ್ಕೆಯಾಗುವುದನ್ನು ತಪ್ಪಿಸಬೇಕು ಎಂದು ಜಿ7 ನಾಯಕರು ಒತ್ತಾಯಿಸಿದ್ದು ಇಂಧನ ಮಾರುಕಟ್ಟೆ ಸೇರಿದಂತೆ ಮಾರುಕಟ್ಟೆ ಸ್ಥಿರತೆಯನ್ನು ಕಾಪಾಡಲು ಕೆಲಸ ಮಾಡುವುದಾಗಿ ಪುನರುಚ್ಚರಿಸಿದ್ದಾರೆ.
Next Story





