ಪರಮಾಣು ಕೇಂದ್ರಗಳ ಮೇಲಿನ ಅಮೆರಿಕದ ದಾಳಿಯನ್ನು ಖಂಡಿಸಿದ ಇರಾನ್
ದಾಳಿಗೂ ಮೊದಲೇ ನಡೆದಿತ್ತು ಫೋರ್ಡೋ ಪರಮಾಣು ಕೇಂದ್ರದ ಸ್ಥಳಾಂತರ!

Pic: AP
ಟೆಹರಾನ್ : ಪರಮಾಣು ಕೇಂದ್ರಗಳ ಮೇಲಿನ ಅಮೆರಿಕದ ದಾಳಿಯನ್ನು ಇರಾನ್ ಖಂಡಿಸಿದೆ. ಇದು ಎಂದು ಕರೆದಿರುವ ಇರಾನ್ ಪರಮಾಣು ಕಾರ್ಯಕ್ರಮವನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಪುನರುಚ್ಚರಿಸಿದೆ.
ಇಸ್ರೇಲ್–ಇರಾನ್ ಸಂಘರ್ಷಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದ ಅಮೆರಿಕ ಬೆಳಗಿನ ಜಾವ ಇರಾನ್ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇರಾನಿನ ಪ್ರಮುಖ ಪರಮಾಣು ಸೌಲಭ್ಯಗಳಾದ ಫೋರ್ಡೋ, ನಟಾಂಝ್ ಮತ್ತು ಇಸ್ಫಹಾನ್ ಮೇಲೆ ಗುರಿಯಾಗಿಟ್ಟುಕೊಂಡು ವೈಮಾನಿಕ ದಾಳಿ ನಡೆಸಿತ್ತು.
ಈ ಕುರಿತು ಇರಾನ್ ಸಂಸತ್ತಿನ ಸ್ಪೀಕರ್ ಅವರ ಹಿರಿಯ ಸಹಾಯಕ ಮಹದಿ ಮುಹಮ್ಮದಿ ಪ್ರತಿಕ್ರಿಯಿಸಿ, ಇರಾನ್ನ ಮೂರು ತಾಣಗಳು ದಾಳಿಗೊಳಗಾಗಿವೆ ಎಂದು ದೃಢಪಡಿಸಿದ್ದಾರೆ. ಫೋರ್ಡೋ ತಾಣವನ್ನು ಬಹಳ ಹಿಂದೆಯೇ ಸ್ಥಳಾಂತರಿಸಲಾಗಿದೆ ಮತ್ತು ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ.
ಇರಾನ್ನ ಫೋರ್ಡೋ, ಇಸ್ಫಹಾನ್, ನಟಾಂಝ್ ಪರಮಾಣು ತಾಣಗಳ ಮೇಲೆ ಅಮೆರಿಕ ಬಾಂಬ್ ದಾಳಿ ಮಾಡಿದೆ ಎಂದು ಟ್ರಂಪ್ ಈ ಮೊದಲು ಹೇಳಿದ್ದರು.
Next Story





