IRGC ನೌಕಾಪಡೆ ಕಮಾಂಡರ್ ಅಲಿರೆಝಾ ತಂಗ್ಸಿರಿ ಮೃತಪಟ್ಟಿದ್ದಾರೆ; ದೃಢಪಡಿಸಿದ ಇರಾನ್

ಅಲಿರೆಝಾ ತಂಗ್ಸಿರಿ (Photo source: X)
ತೆಹ್ರಾನ್: ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್ (IRGC) ನೌಕಾಪಡೆಯ ಕಮಾಂಡರ್ ಅಲಿರೆಝಾ ತಂಗ್ಸಿರಿ ಅವರು ಮೃತಪಟ್ಟಿರುವುದನ್ನು ಇರಾನ್ ಅಧಿಕೃತವಾಗಿ ದೃಢಪಡಿಸಿದೆ ಎಂದು aljazeera.com ವರದಿ ಮಾಡಿದೆ
IRGC ಬಿಡುಗಡೆ ಮಾಡಿದ ಹೇಳಿಕೆಯನ್ನು ಉಲ್ಲೇಖಿಸಿದ IRNA ಸುದ್ದಿ ಸಂಸ್ಥೆ, “ಗಾಯಗಳ ತೀವ್ರತೆಯಿಂದ ತಂಗ್ಸಿರಿ ಮೃತಪಟ್ಟಿದ್ದಾರೆ” ಎಂದು ತಿಳಿಸಿದೆ.
ಇದಕ್ಕೂ ಮುನ್ನ, ಕಳೆದ ವಾರ ಇಸ್ರೇಲ್ ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಪ್ರತಿಕ್ರಿಯಿಸಿ, ಇಸ್ರೇಲ್ ಸೇನೆ ನಡೆಸಿದ ನಿಖರ ಮತ್ತು ಮಾರಕ ಕಾರ್ಯಾಚರಣೆಯಲ್ಲಿ ತಂಗ್ಸಿರಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಹತ್ಯೆಯಾಗಿದ್ದಾರೆ ಎಂದು ಹೇಳಿದ್ದರು.
Next Story





