ಅಮೆರಿಕದ ನಿರ್ಬಂಧಗಳನ್ನು ಧಿಕ್ಕರಿಸಿದ ಇರಾನ್

ಟೆಹರಾನ್: ಅಮೆರಿಕದ ಹೊಸ ನಿರ್ಬಂಧಗಳನ್ನು ಎದುರಿಸಲು ಇರಾನ್ ಎರಡು ವರ್ಷಗಳ ಯೋಜನೆಯನ್ನು ಹೊಂದಿದೆ ಎಂದು ಇರಾನ್‍ನ ಆರ್ಥಿಕ ಸಚಿವ ಅಲಿ ಮದನಿ ಹೇಳಿದ್ದು ಅಮೆರಿಕಕ್ಕೆ `ಮತ್ತೊಂದು ಸೋಲು ಖಚಿತ ' ಎಂದು ಭವಿಷ್ಯ ನುಡಿದಿದ್ದಾರೆ.
ಇರಾನ್ ಜನರು ಮತ್ತು ದೇಶದ ಅಧಿಕಾರಿಗಳ ದೃಢ ಸಂಕಲ್ಪವನ್ನು ಪರೀಕ್ಷಿಸಲು ಟ್ರಂಪ್ ತಮ್ಮಿಂದ ಸಾಧ್ಯವಾದಷ್ಟನ್ನೆಲ್ಲಾ ಮಾಡಿದ್ದಾರೆ. ಆದರೆ ಪ್ರತಿ ಬಾರಿಯೂ ವಿಫಲರಾಗಿದ್ದಾರೆ. ಅವರು ಮತ್ತೊಂದು ಸೋಲನ್ನು ಅನುಭವಿಸಲು ಬಯಸಿದಂತಿದೆ. ನಾವು ಈ ಯೋಜನೆಗಳನ್ನು ದೀರ್ಘಕಾಲದಿಂದ ನಿರೀಕ್ಷಿಸುತ್ತಿದ್ದೇವೆ. ಸರಕಾರವು ಸಂಪೂರ್ಣ ಸಿದ್ಧವಾಗಿದೆ ಹಾಗೂ ಈ ಘಟನೆಗಳನ್ನು ನಿರ್ವಹಿಸಲು ಎರಡು ವರ್ಷಗಳ ಯೋಜನೆಯನ್ನು ಹೊಂದಿದೆ' ಎಂದು ಮದನಿ ತಿಳಿಸಿರುವುದಾಗಿ ವರದಿಯಾಗಿದೆ.
ಅಮೆರಿಕವು ತನ್ನ ಮಿಲಿಟರಿ ಉದ್ದೇಶಗಳನ್ನು ತಲುಪಲು ವಿಫಲವಾಗಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ವಾಷಿಂಗ್ಟನ್ ತನ್ನ ಗುರಿಗಳನ್ನು ಸಾಧಿಸಿದ್ದರೆ, `ಇತಿಹಾಸದಲ್ಲೇ ಅತಿ ದೊಡ್ಡ ಹಣಕಾಸು ಆಕ್ರಮಣ' ಮಾಡುವ ಅಗತ್ಯವೇನಿತ್ತು?" ಎಂದು ಇರಾನ್‍ನ ಉಪ ವಿದೇಶಾಂಗ ಸಚಿವರು ಪ್ರಶ್ನಿಸಿದ್ದು ಈ ನಡೆಯು ಅಮೆರಿಕ ಸೋಲನ್ನು ಒಪ್ಪಿಕೊಂಡಿರುವ ಸೂಚನೆ ಎಂದು ಬಣ್ಣಿಸಿದ್ದಾರೆ.




