ಯುಎಇಯಿಂದ ಪರಿಹಾರ ಕೋರಿ ವಿಶ್ವಸಂಸ್ಥೆಗೆ ಪತ್ರ ಬರೆದ ಇರಾನ್: ವರದಿ

Photo credit: PTI
“ಇರಾನ್ ಮೇಲಿನ ದಾಳಿಗೆ ಅಮೆರಿಕಾಗೆ ತನ್ನ ಭೂ ಪ್ರದೇಶ ಬಳಸಲು ಯುಎಇ ಅನುಮತಿಸಿದೆ”
ಇರಾನ್ ಮೇಲೆ ಅಮೆರಿಕ ದಾಳಿಗೆ ಯುಎಇ ಸಹಕಾರ ನೀಡಿದೆ ಎಂದು ಆರೋಪಿಸಿದ ಇರಾನ್ನ ವಿಶ್ವಸಂಸ್ಥೆಯ ರಾಯಭಾರಿ ಅಮೀರ್ ಸಯೀದ್ ಇರಾವನಿ, ಯುಎಇಯಿಂದ ಪರಿಹಾರವನ್ನು ಕೋರಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಇರಾನ್ನ Nournews ಪ್ರಕಾರ, ಇರಾನ್ ಮೇಲಿನ ದಾಳಿಗೆ ಅಮೆರಿಕಗೆ ತನ್ನ ಭೂ ಪ್ರದೇಶವನ್ನು ಬಳಸಲು ಯುಎಇ ಅನುಮತಿಸಿದೆ. ಅಂತಾರಾಷ್ಟ್ರೀಯವಾಗಿ ಇದು ತಪ್ಪಾದ ಕೃತ್ಯವಾಗಿದ್ದು, ಇದರಿಂದ ಹೊಣೆಗಾರಿಕೆಯನ್ನು ಹೊಂದಿದೆ. ದಾಳಿಯಿಂದ ಉಂಟಾದ ಎಲ್ಲಾ ಭೌತಿಕ ಮತ್ತು ನೈತಿಕ ಹಾನಿಗಳಿಗೆ ಯುಎಇ ಪರಿಹಾರ ನೀಡುವ ಅಂತಾರಾಷ್ಟ್ರೀಯ ಜವಾಬ್ದಾರಿ ಹೊಂದಿದೆ ಎಂದು ಅಮೀರ್ ಸಯೀದ್ ಇರಾವನಿ ಪ್ರತಿಪಾದಿಸಿದ್ದಾರೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ದಾಳಿ ಆರಂಭಿಸಿದ ಬಳಿಕ, ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ನ ಪ್ರತಿದಾಳಿ ಮುಂದುವರಿದಿದೆ.
Next Story





