ಖೆಶ್ಮ್ ದ್ವೀಪದಲ್ಲಿ ಅಮೆರಿಕದ MQ-9 ಡ್ರೋನ್ ಧ್ವಂಸಗೊಳಿಸಿದ ಇರಾನ್
ಎರಡು ಕ್ಷಿಪಣಿಗಳು ಅಪ್ಪಳಿಸಿದ ಬೆನ್ನಲ್ಲೇ ಡ್ರೋನ್ ಹೊಡೆದುರುಳಿಸಿದ ಘೋಷಣೆ

ಸಾಂದರ್ಭಿಕ ಚಿತ್ರ | Photo credit : AI
ಟೆಹರಾನ್: ಹಾರ್ಮುಝ್ ಜಲಸಂಧಿಯಲ್ಲಿರುವ ಖೆಶ್ಮ್ ದ್ವೀಪದಲ್ಲಿ ಅಮೆರಿಕದ MQ-9 ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ಘೋಷಿಸಿದೆ. ಇರಾನ್ ನ ವಾಯು ರಕ್ಷಣಾ ಪಡೆ ಡ್ರೋನ್ ಅನ್ನು ತಡೆಹಿಡಿದು ನಾಶಪಡಿಸಿದೆ ಎಂದು ಸರ್ಕಾರಿ ಪ್ರಸಾರ ಸಂಸ್ಥೆ IRIB ವರದಿ ಮಾಡಿದೆ.
ಇದಕ್ಕೂ ಮುನ್ನ ಖೆಶ್ಮ್ ದ್ವೀಪದ ಮೇಲೆ ಎರಡು ಕ್ಷಿಪಣಿಗಳು ಅಪ್ಪಳಿಸಿರುವುದಾಗಿ ಇರಾನ್ ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ದ್ವೀಪದಲ್ಲಿ ವಿಮಾನ ಹಾರುವಂತಹ ಶಬ್ದ ಕೇಳಿಸಿದೆ ಎಂದು ಸರ್ಕಾರಿ ಮಾಧ್ಯಮಗಳು ತಿಳಿಸಿದ್ದವು.
ದ್ವೀಪದ ಸುಸಾ (Susa) ಪ್ರದೇಶದಲ್ಲಿ ಎರಡು ಕ್ಷಿಪಣಿಗಳು ಅಪ್ಪಳಿಸಿರುವುದಾಗಿ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಆದರೆ, ಈ ಘಟನೆಯ ಕುರಿತು ಸ್ಥಳೀಯ ಮತ್ತು ಪ್ರಾದೇಶಿಕ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸಂಸ್ಥೆ ವರದಿ ಮಾಡಿದೆ.
Next Story




