ಇಸ್ರೇಲ್ ಪರ ಗೂಢಚಾರಿಕೆ ನಡೆಸಿದ ಆರೋಪ: ಶಂಕಿತ ಆರೋಪಿಯನ್ನು ಗಲ್ಲಿಗೇರಿಸಿದ ಇರಾನ್

ಸಾಂದರ್ಭಿಕ ಚಿತ್ರ | Photo Credit : freepik
ಟೆಹರಾನ್: ಇಸ್ರೇಲ್ ಗುಪ್ತಚರ ಸಂಸ್ಥೆ ಹಾಗೂ ಸೇನೆಯ ಪರವಾಗಿ ಗೂಢಚಾರಿಕೆ ನಡೆಸಿದ ಆರೋಪದಲ್ಲಿ ದೋಷಿಯೆಂದು ಘೋಷಿಸಲ್ಪಟ್ಟಿದ್ದ ಆರೋಪಿಯೊಬ್ಬನನ್ನು ಶನಿವಾರ ಗಲ್ಲಿಗೇರಿಸಲಾಗಿದೆ ಎಂದು ಇರಾನ್ ಸರಕಾರಿ ಸುದ್ದಿ ವಾಹಿನಿ ವರದಿ ಮಾಡಿದೆ.
ಗಲ್ಲಿಗೇರಿಸಲ್ಪಟ್ಟ ವ್ಯಕ್ತಿಯನ್ನು ಅಘಿಲ್ ಕೇಶವಾರ್ಝ್ ಎಂದು ಗುರುತಿಸಲಾಗಿದ್ದು, ಆತ ಮೊಸಾದ್ ನೊಂದಿಗೆ ನಿಕಟ ಗುಪ್ತಚರ ಸಹಕಾರ ಹೊಂದಿದ್ದ ಹಾಗೂ ಇರಾನ್ ಸೇನೆ ಮತ್ತು ಭದ್ರತಾ ಪ್ರದೇಶಗಳ ಭಾವಚಿತ್ರಗಳನ್ನು ತೆಗೆದುಕೊಂಡಿದ್ದ ಎಂದು ಸರಕಾರಿ ಸುದ್ದಿ ವಾಹಿನಿ ವರದಿ ಮಾಡಿದೆ.
ಕಳೆದ ಮೇ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ಟೆಹರಾನ್ ನಿಂದ ಸುಮಾರು 600 ಕಿಮೀ ದೂರವಿರುವ ಉರ್ಮಿಯಾ ನಗರದ ವಾಯುವ್ಯ ಭಾಗದಲ್ಲಿರುವ ಸೇನಾ ಮುಖ್ಯರ ಕಚೇರಿಯ ಭಾವಚಿತ್ರಗಳನ್ನು ತೆಗೆಯುವಾಗ ಅಘಿಲ್ ಕೇಶವಾರ್ಝ್ ಬಂಧಿತನಾಗಿದ್ದ. ಆತ ಟೆಹರಾನ್ ಸೇರಿದಂತೆ ಹಲವು ನಗರಗಳಲ್ಲಿ ಇಂತಹ 200ಕ್ಕೂ ಹೆಚ್ಚು ಕಾರ್ಯಯೋಜನೆಗಳನ್ನು ಮೊಸಾದ್ ಗಾಗಿ ನಿರ್ವಹಿಸಿದ್ದ ಎಂದು ಆರೋಪಿಸಲಾಗಿತ್ತು.
Next Story





