ಭಾರತ, ಚೀನಾ, ಇರಾಕ್, ಖತರ್ ಹಡಗುಗಳಿಗೆ ಹಾರ್ಮುಝ್ ನಿರ್ಬಂಧಗಳಿಂದ ವಿನಾಯಿತಿ: ಇರಾನ್

ಸಾಂದರ್ಭಿಕ ಚಿತ್ರ | Photo Credit : X
ಟೆಹರಾನ್: ಭಾರತ, ಚೀನಾ, ಇರಾಕ್ ಮತ್ತು ಖತರ್ ದೇಶಗಳ ಸರಕು ಸಾಗಣೆ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯನ್ನು ಬಳಸುವುದಕ್ಕೆ ವಿಧಿಸಲಾಗಿದ್ದ ನಿರ್ಬಂಧಗಳಿಂದ ಇರಾನ್ ವಿನಾಯಿತಿ ನೀಡಿದೆ. ಭಾರತದಿಂದ ಪ್ರಮುಖವಾಗಿ ಔಷಧಗಳನ್ನು ತರಿಸಿಕೊಳ್ಳುವುದನ್ನು ಸುಲಭಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾನ್ನ ಸಂಸದರೊಬ್ಬರು ತಿಳಿಸಿದ್ದಾರೆ.
ಈ ನಾಲ್ಕು ದೇಶಗಳ ಹಡಗುಗಳು ಈ ಆಯಕಟ್ಟಿನ ಜಲಮಾರ್ಗದ ಮೂಲಕ ಮುಕ್ತವಾಗಿ ಸಂಚರಿಸಬಹುದು ಮತ್ತು ಅಮೆರಿಕ ಕೂಡ ಅವುಗಳನ್ನು ತಡೆಯುತ್ತಿಲ್ಲ ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಉಪಾಧ್ಯಕ್ಷ ಅಮೀರ್ ಹಯಾತ್-ಮೊಗದ್ದಮ್ ಹೇಳಿದ್ದಾರೆ.
ಈ ದೇಶಗಳೊಂದಿಗೆ ಇರಾನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈ ವಿನಾಯಿತಿಗಳನ್ನು ನೀಡಲಾಗಿದೆ. ಭಾರತದಿಂದ ಔಷಧಗಳ ಆಮದನ್ನು ಸಕ್ರಿಯಗೊಳಿಸಲು ಭಾರತೀಯ ಹಡಗುಗಳ ಸಂಚಾರವನ್ನು ಸುಲಭಗೊಳಿಸುತ್ತಿದೆ. ಹಾಗೂ ಚೀನಾದ ರಾಜಕೀಯ ಬೆಂಬಲವನ್ನು ಪಡೆಯುವ ಉದ್ದೇಶದಿಂದ ಚೀನೀ ಹಡಗುಗಳಿಗೆ ವಿನಾಯಿತಿ ನೀಡಲಾಗಿದೆ. ಭಾರತ ಮತ್ತು ಚೀನಾದ ಹಡಗುಗಳಿಂದ ಇರಾನ್ ಸಾರಿಗೆ ಶುಲ್ಕವನ್ನು ಸಂಗ್ರಹಿಸುತ್ತದೆ ಮತ್ತು ಖತರ್ನ ಹಡಗುಗಳಿಗೆ ಯಾವುದೇ ಶುಲ್ಕವಿಲ್ಲದೆ ಸಾಗಲು ಅನುಮತಿಸುತ್ತದೆ ಎಂದು ಅವರು ಹೇಳಿದ್ದಾರೆ.
ಇರಾಕ್ನ ಹಡಗುಗಳು ಸಾರಿಗೆ ಶುಲ್ಕವನ್ನು ಪಾವತಿಸಬೇಕೇ ಅಥವಾ ಇಲ್ಲವೇ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.






