ಹಾರ್ಮುಝ್ನಲ್ಲಿ ಎರಡು ನೌಕೆಗಳತ್ತ ಇರಾನ್ನಿಂದ `ಎಚ್ಚರಿಕೆಯ' ಗುಂಡಿನ ದಾಳಿ

ಸಾಂದರ್ಭಿಕ ಚಿತ್ರ | Photo Credit : aljazeera.com
ಟೆಹರಾನ್, ಜು.13: ವ್ಯೂಹಾತ್ಮಕವಾಗಿ ಪ್ರಮುಖವಾಗಿರುವ ಜಲಮಾರ್ಗದ ಮೇಲಿನ ನಿಯಂತ್ರಣಕ್ಕಾಗಿ ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಪೈಪೋಟಿ ನಡೆಯುತ್ತಿರುವ ಬೆನ್ನಲ್ಲೇ, ಹಾರ್ಮುಝ್ ಜಲಸಂಧಿಯನ್ನು ದಾಟಲು ಯತ್ನಿಸುತ್ತಿದ್ದ ಎರಡು ಹಡಗುಗಳತ್ತ ಇರಾನ್ ಸೋಮವಾರ `ಎಚ್ಚರಿಕೆಯ ಗುಂಡುಗಳನ್ನು' ಹಾರಿಸಿದೆ ಎಂದು ಅಲ್ಲಿನ ಸರಕಾರಿ ದೂರದರ್ಶನ ವರದಿ ಮಾಡಿದೆ.
`ಇಂದು ಬೆಳಗ್ಗೆ, ಹಾರ್ಮುಝ್ ಜಲಸಂಧಿಯನ್ನು ಕಾನೂನುಬಾಹಿರವಾಗಿ ದಾಟಲು ಯತ್ನಿಸುತ್ತಿದ್ದ ಎರಡು ಹಡಗುಗಳನ್ನು ಗುರಿಯಾಗಿಸಿಕೊಂಡು ರೆವಲ್ಯೂಷನರಿ ಗಾಡ್ರ್ಸ್ನ ನೌಕಾಪಡೆಯು ಎಚ್ಚರಿಕೆಯ ಗುಂಡುಗಳನ್ನು ಹಾರಿಸಿ ತಡೆದಿದೆ' ಎಂದು ವರದಿ ತಿಳಿಸಿದೆ.
Next Story




