ಇಸ್ರೇಲ್ ಪರ ಬೇಹುಗಾರಿಕೆ: ಮತ್ತೆ ಮೂವರನ್ನು ಗಲ್ಲಿಗೇರಿಸಿದ ಇರಾನ್

ಸಾಂದರ್ಭಿಕ ಚಿತ್ರ
ಟೆಹರಾನ್ : ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸಾದ್ಗಾಗಿ ಬೇಹುಗಾರಿಕೆ ನಡೆಸಿದ ಮೂವರು ಪ್ರಜೆಗಳನ್ನು ಇರಾನ್ ಗಲ್ಲಿಗೇರಿಸಿದೆ ಎಂದು ವರದಿಯಾಗಿದೆ.
ಇರಾನ್ ದೇಶದ ವಾಯುವ್ಯ ಗಡಿ ಪ್ರದೇಶದಲ್ಲಿರುವ ಉರ್ಮಿಯಾ ಜೈಲಿನಲ್ಲಿ ಬುಧವಾರ ಬೆಳಿಗ್ಗೆ ಮೂವರು ಶಂಕಿತರನ್ನು ಗಲ್ಲಿಗೇರಿಸಲಾಗಿದೆ ಎಂದು ಮಿಝಾನ್ ವರದಿಯು ತಿಳಿಸಿದೆ.
ʼದೇವರ ವಿರುದ್ಧ ಯುದ್ಧ ಮಾಡಿದ ಮತ್ತು ಇಸ್ರೇಲ್ನೊಂದಿಗೆ ಸಹಯೋಗದ ಮೂಲಕ ಭ್ರಷ್ಟಾಚಾರವನ್ನು ಹರಡಿದ ಆರೋಪದ ಮೇಲೆ ಅವರನ್ನು ಗಲ್ಲಿಗೇರಿಸಲಾಗಿದೆʼ ಎಂದು ವರದಿಯು ತಿಳಿಸಿದೆ.
ಜೂನ್ 13ರಂದು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿತ್ತು. ಆ ಬಳಿಕ ಇಸ್ರೇಲ್ಗಾಗಿ ಬೇಹುಗಾರಿಕೆ ನಡೆಸಿದ ಮತ್ತು ಗುಪ್ತಚರ ಸಂಸ್ಥೆ ಮೊಸಾದ್ ಜೊತೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳಲು ಯತ್ನಿಸಿದ ಆರೋಪದಲ್ಲಿ ಮಜೀದ್ ಮೊಸೇಬಿ ಸೇರಿದಂತೆ ಮೂವರನ್ನು ಇರಾನ್ ಗಲ್ಲಿಗೇರಿಸಿತ್ತು. ಇದೀಗ ಮತ್ತೆ ಮೂವರನ್ನು ಇರಾನ್ ಗಲ್ಲಿಗೇರಿಸಿದೆ ಎಂದು ವರದಿಯಾಗಿದೆ.
Next Story





