ಹಾರ್ಮುಝ್ನಲ್ಲಿ ಇರಾನ್ಗೆ ಟೋಲ್ ಪಾವತಿಸಿದ ಶಿಪ್ಪಿಂಗ್ ಸಂಸ್ಥೆಗಳಿಗೆ ನಿರ್ಬಂಧ: ಅಮೆರಿಕ ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : AP , PTI
ವಾಶಿಂಗ್ಟನ್, ಮೇ 2: ಹಾರ್ಮುಝ್ ಜಲಸಂಧಿಯ ಮೂಲಕ ಸುರಕ್ಷಿತ ಪ್ರಯಾಣಕ್ಕಾಗಿ ಇರಾನ್ಗೆ ಶುಲ್ಕ ಪಾವತಿಸಿದ ಶಿಪ್ಪಿಂಗ್ ಸಂಸ್ಥೆಗಳು ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಜಾಗತಿಕ ತೈಲ ಮತ್ತು ಅನಿಲ ವ್ಯಾಪಾರದ 20%ದಷ್ಟು ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತದೆ. ಫೆಬ್ರವರಿ 28ರಂದು ಇಸ್ರೇಲ್ ಮತ್ತು ಅಮೆರಿಕ ಯುದ್ಧ ಪ್ರಾರಂಭಿಸಿದ ಬಳಿಕ ಜಲಸಂಧಿಯನ್ನು ಇರಾನ್ ಪರಿಣಾಮಕಾರಿಯಾಗಿ ಮುಚ್ಚಿದೆ. ನಂತರದ ದಿನಗಳಲ್ಲಿ ಶುಲ್ಕ ಪಾವತಿಸಿದರೆ ಸುರಕ್ಷಿತ ಪ್ರಯಾಣಕ್ಕೆ ಅವಕಾಶ ನೀಡುವುದಾಗಿ ಘೋಷಿಸಿತ್ತು.
ನಗದು ರೂಪದಲ್ಲಿ, ಡಿಜಿಟಲ್ ಸ್ವತ್ತುಗಳು, ಆಫ್ಸೆಟ್ಗಳು, ಅನೌಪಚಾರಿಕ ವಿನಿಮಯಗಳು, ಅಥವಾ ಇತರ ರೀತಿಯ ಪಾವತಿಗಳು, ವರ್ಗಾವಣೆಗಳ ರೂಪದಲ್ಲಿ ಟೋಲ್ ಪಾವತಿಯಾಗಬಹುದು. ಈ ರೀತಿಯಲ್ಲಿ ಟೋಲ್ ಪಾವತಿಸುವವರು ನಿರ್ಬಂಧ ಕ್ರಮಕ್ಕೆ ಒಳಗಾಗಲಿದ್ದಾರೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
Next Story




