ಕದನ ವಿರಾಮಕ್ಕೆ ರಶ್ಯ, ಚೀನಾ ಸ್ವಾಗತ

Photo : AP
ಮಾಸ್ಕೋ: ಇರಾನ್-ಇಸ್ರೇಲ್ ನಡುವೆ ಘೋಷಣೆಯಾಗಿರುವ ಕದನ ವಿರಾಮವನ್ನು ಸ್ವಾಗತಿಸುವುದಾಗಿ ರಶ್ಯ ಮತ್ತು ಚೀನಾ ಹೇಳಿವೆ.
`ನಿಜವಾಗಿಯೂ ಕದನ ವಿರಾಮವನ್ನು ಸಾಧಿಸಿದ್ದರೆ ನಾವದನ್ನು ಸ್ವಾಗತಿಸುತ್ತೇವೆ ಮತ್ತು ಇದು ಸುಸ್ಥಿರ ಕದನ ವಿರಾಮವಾಗಿರುತ್ತದೆ ಎಂದು ಆಶಿಸುವುದಾಗಿ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅಂತರಾಷ್ಟ್ರೀಯ ಸಮುದಾಯದೊಂದಿಗೆ ಕಾರ್ಯ ನಿರ್ವಹಿಸಲು ಚೀನಾ ಬಯಸಿದೆ. ಉದ್ವಿಗ್ನತೆ ಉಲ್ಬಣಗೊಳ್ಳುವುದನ್ನು ಚೀನಾ ಬಯಸುತ್ತಿಲ್ಲ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಬಿಕ್ಕಟ್ಟು ಇತ್ಯರ್ಥಗೊಳ್ಳಬೇಕೆಂದು ಆಗ್ರಹಿಸುತ್ತದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.
Next Story