ಇರಾನ್ ನಿಂದ ಇಸ್ರೇಲ್ ಮೇಲೆ ಮತ್ತೆ ಕ್ಷಿಪಣಿ ದಾಳಿ: ಇಸ್ರೇಲ್ ಸೇನೆ ಹೇಳಿಕೆ

ಟೆಲ್ ಅವಿವ್: ಇಸ್ರೇಲ್ ನ ಜನನಿಬಿಡ ಪ್ರದೇಶಗಳ ಕಡೆಗೆ ಇರಾನ್ ಮತ್ತೊಂದು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ನಡೆಸುತ್ತಿದ್ದಂತೆ ಉತ್ತರ ಇಸ್ರೇಲ್ನಾದ್ಯಂತ ಸೈರನ್ಗಳು ಮೊಳಗಿದವು. ತನ್ನ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ತಾನು ಪ್ರತಿಕ್ರಿಯಿಸಿರುವುದಾಗಿ ಇರಾನ್ ಘೋಷಿಸಿದ ಬಳಿಕ ಈ ದಾಳಿ ನಡೆದಿದೆ.
"ಸ್ವಲ್ಪ ಸಮಯದ ಹಿಂದೆ, ಐಡಿಎಫ್ ಇರಾನ್ನಿಂದ ಇಸ್ರೇಲ್ ನ ಪ್ರದೇಶದ ಕಡೆಗೆ ಉಡಾಯಿಸಲಾದ ಕ್ಷಿಪಣಿಗಳನ್ನು ಗುರುತಿಸಿದೆ. ದಾಳಿಯನ್ನು ತಡೆಯಲು ರಕ್ಷಣಾತ್ಮಕ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿವೆ" ಎಂದು ಇಸ್ರೇಲ್ ರಕ್ಷಣಾ ಪಡೆಗಳು ತನ್ನ ಟೆಲಿಗ್ರಾಮ್ ಚಾನೆಲ್ನಲ್ಲಿ ಒಳಬರುವ ಕ್ಷಿಪಣಿ ದಾಳಿಯನ್ನು ದೃಢಪಡಿಸಿವೆ.
"ಸೈರನ್ ಮೊಳಗಿದ ನಂತರ, ಸಾರ್ವಜನಿಕರಿಗೆ ಸಂರಕ್ಷಿತ ಸ್ಥಳವನ್ನು ಪ್ರವೇಶಿಸಲು ಮತ್ತು ಮುಂದಿನ ಸೂಚನೆ ಬರುವವರೆಗೆ ಅಲ್ಲಿಯೇ ಇರಲು ಸೂಚಿಸಲಾಗಿದೆ. ಸ್ಪಷ್ಟ ನಿರ್ದೇಶನದ ನಂತರ ಮಾತ್ರ ಸಂರಕ್ಷಿತ ಸ್ಥಳವನ್ನು ಬಿಡಲು ಅನುಮತಿಸಲಾಗಿದೆ. ಹೋಮ್ ಫ್ರಂಟ್ ಕಮಾಂಡ್ನ ಸೂಚನೆಗಳನ್ನು ಅನುಸರಿಸುವುದನ್ನು ಮುಂದುವರಿಸಿ" ಎಂದು ಇಸ್ರೆಲ್ ಸೇನಾ ಪಡೆ ತನ್ನ ನಾಗರಿಕರಿಗೆ ನೀಡಿದ ಎಚ್ಚರಿಕೆಯಲ್ಲಿ ಸೇರಿಸಿದೆ.





