ಬಹ್ರೇನ್ ಮೇಲೆ ಇರಾನ್ ನಿಂದ ಡ್ರೋನ್ ದಾಳಿ: ವರದಿ

Photo Credit : ANI
ಮನಾಮ, ಜೂ.27: ದ್ವೀಪ ರಾಷ್ಟ್ರವನ್ನು ಗುರಿಯಾಗಿಸಿಕೊಂಡು ಇರಾನ್ ಹೊಸ ಡ್ರೋನ್ ದಾಳಿಯನ್ನು ನಡೆಸಿದೆ ಎಂದು ಬಹ್ರೇನ್ ಶನಿವಾರ ಆರೋಪಿಸಿದೆ.
ತನ್ನ ಭೂಪ್ರದೇಶದ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಇದು ತನ್ನ ಸಾರ್ವಭೌಮತ್ವದ ಉಲ್ಲಂಘನೆಯಾಗಿದೆ ಎಂದು ಬಹ್ರೇನ್ನ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. ಬಹ್ರೇನ್ನಲ್ಲಿ ಅಮೆರಿಕ ನೌಕಾಪಡೆಯ ನೆಲೆಯಿದೆ.
ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು:
ತನ್ನ ದಕ್ಷಿಣ ಕರಾವಳಿಯ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ, ಅಮೆರಿಕನ್ ಪಡೆಗಳಿಗೆ ಸಂಬಂಧಿಸಿದ ಗುರಿಗಳ ಮೇಲೆ ತಾನು ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ. ಅಮೆರಿಕದ ಈ ದಾಳಿಯು ವಿಶ್ವಸಂಸ್ಥೆಯ ಸನ್ನದು ಮತ್ತು ಉಭಯ ದೇಶಗಳ ನಡುವಿನ ಯುದ್ಧಾಂತ್ಯದ ಜ್ಞಾಪಕ ಪತ್ರವನ್ನು ಉಲ್ಲಂಘಿಸಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ತಾನು ಕದನ ವಿರಾಮ ಜ್ಞಾಪಕ ಪತ್ರವನ್ನು ಗೌರವಿಸಿರುವುದಾಗಿ ಮತ್ತು ಯಾವುದೇ ಉಲ್ಲಂಘನೆಗಳಿಗೆ ಪ್ರತಿಕ್ರಿಯಿಸುವುದಾಗಿ ಅಮೆರಿಕ ಪುನರುಚ್ಚರಿಸಿದೆ. 'ಹಿಂಸೆಗೆ ಹಿಂಸೆಯ ಮೂಲಕವೇ ಉತ್ತರಿಸಲಾಗುವುದು' ಎಂದು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ.
ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಇರಾನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. 'ಹಾರ್ಮುಝ್ ಜಲಸಂಧಿಯನ್ನು ಇರಾನ್ ಆಳುತ್ತದೆ, ಆದ್ದರಿಂದ ನಿಯಮಗಳನ್ನು ಗೌರವಿಸಿ' ಎಂದು ಬರೆದಿರುವ ಅವರು, ಟೆಹರಾನ್ ತೆಗೆದುಕೊಂಡ ಕ್ರಮಗಳು ಕದನ ವಿರಾಮದ ಉಲ್ಲಂಘನೆಯಲ್ಲ; ಬದಲಿಗೆ ಕದನ ವಿರಾಮದ ನಿರ್ವಹಣೆ ಎಂದು ಪ್ರತಿಪಾದಿಸಿದ್ದಾರೆ.






