ಇಸ್ರೇಲ್ ಮೇಲೆ ಇರಾನ್ನಿಂದ ಕ್ಷಿಪಣಿ ದಾಳಿ: 10 ಮಂದಿ ಮೃತ್ಯು

Photo: x
ಟೆಹ್ರಾನ್/ಟೆಲ್ ಅವೀವ್: ಹಾಫಿಯಾ ಹಾಗೂ ಟೆಲ್ ಅವೀವ್ ಸಮೀಪದ ಪ್ರದೇಶಗಳು ಸೇರಿದಂತೆ ಇಸ್ರೇಲ್ನಾದ್ಯಂತ ಇರಾನ್ ಕ್ಷಿಪಣಿ ದಾಳಿ ನಡೆಸುತ್ತಿದ್ದು, ಈ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿಗಳು ಹಾಗೂ ಮಾಧ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಸೇನಾಪಡೆಗಳು ಇರಾನ್ನಾದ್ಯಂತ ಇರುವ ನಾಗರಿಕ ಹಾಗೂ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿ, ಟೆಹ್ರಾನ್ ಬಳಿಯ ಸಹ್ರಾನ್ ತೈಲ ಘಟಕದಲ್ಲಿ ಬೆಂಕಿ ಹೊತ್ತಿಕೊಳ್ಳುವಂತೆ ಮಾಡಿದ ನಂತರ, ಇರಾನ್ ಈ ಪ್ರತಿ ದಾಳಿ ನಡೆಸುತ್ತಿದೆ.
ಈ ನಡುವೆ, ನಾವು ಇರಾನ್ ಆಡಳಿತದ ಪರಮಾಣು ಶಸ್ತ್ರಾಸ್ತ್ರ ಯೋಜನೆಗಳಿಗೆ ಸಂಬಂಧಿಸಿದ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಸೇನಾಪಡೆ ಹೇಳಿದೆ.
ಮತ್ತೊಂದೆಡೆ, ಗಾಝಾದಲ್ಲಿ ಆಹಾರ ನೆರವು ಪಡೆಯಲು ಕಾಯುತ್ತಿದ್ದ ಫೆಲೆಸ್ತೀನಿಯನ್ನರ ಮೇಲೆ ಇಸ್ರೇಲ್ ಪಡೆಗಳು ಗುಂಡಿನ ದಾಳಿ ನಡೆಸಿದ್ದರಿಂದ, ಮೂರು ಮಂದಿ ಫೆಲೆಸ್ತೀನಿಯನ್ನರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Next Story





