ಅಮೆರಿಕದ ಯುದ್ಧನೌಕೆ ಅಬ್ರಹಾಂ ಲಿಂಕನ್ನತ್ತ ಇರಾನ್ ಕ್ಷಿಪಣಿ ದಾಳಿ

ಸಾಂದರ್ಭಿಕ ಚಿತ್ರ
ಟೆಹ್ರಾನ್: ಅಮೆರಿಕದ ವಿಮಾನವಾಹಕ ಯುದ್ಧನೌಕೆ ಅಬ್ರಹಾಂ ಲಿಂಕನ್ನತ್ತ ಕ್ರೂಸ್ ಕ್ಷಿಪಣಿಯನ್ನು ಪ್ರಯೋಗಿಸಿ ನೌಕೆಯು ತನ್ನ ಸ್ಥಾನವನ್ನು ಬದಲಾಯಿಸುವಂತೆ ಒತ್ತಡ ಹೇರಿರುವುದಾಗಿ ಇರಾನ್ ಬುಧವಾರ ಹೇಳಿದೆ.
ಯುದ್ಧನೌಕೆಗಳು ತನ್ನ ಕ್ಷಿಪಣಿ ವ್ಯವಸ್ಥೆಯ ವ್ಯಾಪ್ತಿಯೊಳಗೆ ಬಂದರೆ ಇನ್ನಷ್ಟು ದಾಳಿಗಳು ನಡೆಯಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ.
ಮಧ್ಯಪ್ರಾಚ್ಯ ಸಂಘರ್ಷಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು:
►ಅಮೆರಿಕ ಮುಂದಿರಿಸಿದ 15 ಅಂಶಗಳ ಯೋಜನೆಯನ್ನು ಇರಾನ್ ತಳ್ಳಿಹಾಕಿದ್ದು ಹಾರ್ಮುಝ್ ಜಲಸಂಧಿಯ ಮೇಲಿನ ಸಾರ್ವಭೌಮತ್ವವನ್ನು ಒಳಗೊಂಡಿರುವ ಹೊಸ ಷರತ್ತುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.
►ಯುದ್ಧ ಯಾವಾಗ ಕೊನೆಗೊಳ್ಳಬೇಕೆಂದು ನಾವು ನಿರ್ಧರಿಸುತ್ತೇವೆ, ಡೊನಾಲ್ಡ್ ಟ್ರಂಪ್ ಅಲ್ಲ ಎಂದು ಇರಾನ್ ಹೇಳಿದೆ.
►ಇರಾನ್ನ ಇಷ್ಫಹಾನ್ ಪ್ರಾಂತದಲ್ಲಿ ಜಲಾಂತರ್ಗಾಮಿ ಅಭಿವೃದ್ಧಿ ಕೇಂದ್ರವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ.
►ಮಂಗಳವಾರ ತಡರಾತ್ರಿಯಿಂದ ಸೌದಿ ಅರೆಬಿಯಾದ ಪೂರ್ವ ಪ್ರಾಂತವನ್ನು ಗುರಿಯಾಗಿಸಿ ಸುಮಾರು 30 ಡ್ರೋನ್ಗಳು ಹಾಗೂ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಯೋಗಿಸಿರುವುದಾಗಿ ವರದಿಯಾಗಿದೆ.




