ಅಮೆರಿಕದ ನೆಲೆಗಳ ಮೇಲೆ ಇರಾನ್ ತೀವ್ರ ದಾಳಿ : ಒಮಾನ್ನ ರಾಡಾರ್ ವ್ಯವಸ್ಥೆ ಧ್ವಂಸ

ಸಾಂದರ್ಭಿಕ ಚಿತ್ರ (AI)
ಟೆಹರಾನ್, ಜು.13: ಅಮೆರಿಕ ಮತ್ತು ಇರಾನ್ ಪಡೆಗಳ ನಡುವೆ ಭಾರಿ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ವಿನಿಮಯ ಮುಂದುವರಿದಿದ್ದು ಇರಾನ್ ಗಲ್ಫ್ ದೇಶಗಳಾದ್ಯಂತ ಇರುವ ಅಮೆರಿಕದ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ತೀವ್ರಗೊಳಿಸಿದೆ.
ಅಮೆರಿಕದ ವಾಯುದಾಳಿಗಳಿಗೆ ಪ್ರತಿಯಾಗಿ, ಬಹ್ರೇನ್ ಮತ್ತು ಕುವೈತ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದು ಒಮಾನ್ನಲ್ಲಿನ ರೇಡಾರ್ ವ್ಯವಸ್ಥೆಗಳನ್ನು ಧ್ವಂಸಗೊಳಿಸಿರುವುದಾಗಿ ಮತ್ತು ಜೋರ್ಡಾನ್ನ ಪ್ರಿನ್ಸ್ ಹಸನ್ ವಾಯುನೆಲೆಯಲ್ಲಿರುವ ಇಂಧನ ಟ್ಯಾಂಕ್ಗಳು ಹಾಗೂ ಮದ್ದುಗುಂಡುಗಳ ಡಿಪೋಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾಡ್ರ್ಸ್ (ಐಆರ್ಜಿಸಿ) ಸೋಮವಾರ ತಿಳಿಸಿದೆ.
ಬಹ್ರೇನ್ನ ಜುಫೇರ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಅಲ್ಲಿ ಭಾರಿ ಬೆಂಕಿ ಹೊತ್ತಿ ಉರಿಯುತ್ತಿದೆ. ಬಹ್ರೇನ್ನಲ್ಲಿ ನಿಯೋಜಿಸಲಾಗಿದ್ದ ಅಮೆರಿಕದ ಡ್ರೋನ್ ಪಡೆಯನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ . ಒಮಾನ್ ದೇಶದಲ್ಲಿರುವ ದೀರ್ಘ ವ್ಯಾಪ್ತಿಯ ವೈಮಾನಿಕ ಎಫ್ಪಿಎಸ್ ರೇಡಾರ್ ಮತ್ತು ಹಡಗುಗಳನ್ನು ಪತ್ತೆಹಚ್ಚುವ ರೇಡಾರ್ ವ್ಯವಸ್ಥೆಯನ್ನು ಧ್ವಂಸಗೊಳಿರುವುದಾಗಿ ಹೇಳಿಕೆ ತಿಳಿಸಿದೆ.




