ಮಧ್ಯಪ್ರಾಚ್ಯ ಸಂಘರ್ಷ| ಅಮೆರಿಕಾಗೆ ಹೊಸ ಕದನ ವಿರಾಮ ಪ್ರಸ್ತಾವನೆ ಕಳುಹಿಸಿದ ಇರಾನ್: ವರದಿ

Photo credit: PTI
ಟೆಹ್ರಾನ್: ಅಮೆರಿಕ-ಇರಾನ್ ನಡುವಿನ ಶಾಂತಿ ಮಾತುಕತೆ ಕುರಿತು ಅನಿಶ್ಚಿತತೆ ಮಧ್ಯೆ ಮಹತ್ವದ ಬೆಳವಣಿಗೆ ನಡೆದಿದೆ. ಇರಾನ್ ಪಾಕಿಸ್ತಾನದ ಮಧ್ಯವರ್ತಿಗಳ ಮೂಲಕ ಅಮೆರಿಕಾಗೆ ಹೊಸ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು Axios ವರದಿ ಮಾಡಿದೆ.
ಪ್ರಸ್ತಾವನೆಯಲ್ಲಿ ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯುವುದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಇದಲ್ಲದೆ ಪರಮಾಣು ಕುರಿತ ಮಾತುಕತೆಗಳನ್ನು ಮುಂದಿನ ಹಂತಕ್ಕೆ ಮುಂದೂಡುವಂತೆ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ ಎಂದು Axios ವರದಿ ಮಾಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೆಹ್ರಾನ್ ಮಾತುಕತೆ ನಡೆಸಲು ಬಯಸಿದರೆ ವಾಷಿಂಗ್ಟನ್ಗೆ ಕರೆ ಮಾಡಬಹುದು, ಆದರೆ ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಬಾರದು ಎಂದು ಪುನರುಚ್ಚರಿಸಿರುವ ಮಧ್ಯೆ ಈ ಪ್ರಸ್ತಾಪವನ್ನು ಇರಾನ್ ಮುಂದಿಟ್ಟಿದೆ.
Next Story




