ಟ್ರಂಪ್–ಮೊಜ್ತಬಾ ಭೇಟಿಯ ಪ್ರಸ್ತಾಪ ತಿರಸ್ಕರಿಸಿದ ಇರಾನ್

ಡೊನಾಲ್ಡ್ ಟ್ರಂಪ್ , ಮೊಜ್ತಬಾ ಖಾಮಿನೈ | Photo Credit : PTI
ಟೆಹರಾನ್, ಜೂ.6: ಇರಾನ್ ನ ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಅವರನ್ನು ಭೇಟಿಯಾಗಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿರಿಸಿದ ಪ್ರಸ್ತಾಪವನ್ನು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಳ್ಳಿಹಾಕಿದ್ದಾರೆ.
ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಇಂತಹ ನಿರೀಕ್ಷೆಗಳು ಪ್ರಸ್ತುತ ವಾಸ್ತವತೆಯಿಂದ ದೂರವಾಗಿವೆ. ನಾವು ವಾಸ್ತವಿಕವಾಗಿರಬೇಕು ಮತ್ತು ನೈಜ ಜಗತ್ತಿನಲ್ಲಿ ಬದುಕಬೇಕು ಎಂದು ಅರಾಘ್ಚಿ ಹೇಳಿರುವುದಾಗಿ ವರದಿಯಾಗಿದೆ.
Next Story




