ಹಾರ್ಮುಝ್ನಲ್ಲಿ 3 ಟ್ಯಾಂಕರ್ಗಳಿಗೆ ಬೆಂಕಿ: ಐಆರ್ಜಿಸಿ ಹೇಳಿಕೆ

ಸಾಂದರ್ಭಿಕ ಚಿತ್ರ | Photo Credit : PTI
ಟೆಹರಾನ್: ತಾನು ಅನುಮತಿ ನೀಡದೆ ಸಂಚರಿಸುವ ಹಡಗುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ತಾಣವಾದ ಹಾರ್ಮುಝ್ ಜಲಸಂಧಿಯಲ್ಲಿ ರವಿವಾರ ಮೂರು ತೈಲ ಟ್ಯಾಂಕರ್ಗಳು ಬೆಂಕಿಗೆ ಆಹುತಿಯಾಗಿವೆ ಎಂದು ಇರಾನ್ನ ಇಸ್ಲಾಮಿಕ್ ರೆವೊಲ್ಯುಷನರಿ ಗಾಡ್ರ್ಸ್ (ಐಆರ್ಜಿಸಿ) ಹೇಳಿದೆ.
ಅನುಮತಿಸದ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೂರು ಟ್ಯಾಂಕರ್ಗಳು ಸ್ಫೋಟಗೊಂಡು ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಿಕೆ ತಿಳಿಸಿದೆ. ಆದರೆ ಟ್ಯಾಂಕರ್ಗಳ ಹೆಸರುಗಳು ಅಥವಾ ಅವು ಯಾವ ದೇಶಕ್ಕೆ ಸೇರಿವೆ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ. ಈ ಮಧ್ಯೆ, ಶನಿವಾರ ಒಮಾನ್ನ ಖಾಸಬ್ ಕರಾವಳಿಯ ಜಲಸಂಧಿಯಲ್ಲಿ ತೈಲ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡಿರುವ ಪರಿಣಾಮವಾಗಿ ಹಡಗಿನಿಂದ 22 ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಬ್ರಿಟನ್ ಕಡಲ ಏಜೆನ್ಸಿ ವರದಿ ಮಾಡಿದೆ.
Next Story




