ʼಸೋದರʼ ಖತರ್ ಮೇಲೆ ದಾಳಿ ನಡೆಸಿಲ್ಲ, ಅಮೆರಿಕದ ವಾಯುನೆಲೆಯಷ್ಟೇ ನಮ್ಮ ಗುರಿ: ಇರಾನ್ ಹೇಳಿಕೆ

PC | PTI
ಟೆಹರಾನ್: ʼಸೋದರʼ ಖತರ್ ಮೇಲೆ ದಾಳಿ ನಡೆಸಿಲ್ಲ, ಅಮೆರಿಕದ ವಾಯುನೆಲೆಯಷ್ಟೇ ನಮ್ಮ ಗುರಿ ಎಂದು ಇರಾನ್ ಹೇಳಿದೆ. ಖತರ್ ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯ ಮೇಲೆ ದಾಳಿ ಮಾಡಿದ ಬಳಿಕ ಈ ಹೇಳಿಕೆ ಬಂದಿದೆ ಎಂದು Aljazeera ವರದಿ ಮಾಡಿದೆ.
ಇರಾನ್ ಕ್ಷಿಪಣಿ ದಾಳಿ ಮಾಡಿದ ಅಲ್ ಉದೈದ್ ವಾಯುನೆಲೆಯು ಖತರ್ ನ ವಸತಿ ಪ್ರದೇಶಗಳಿಂದ ದೂರದಲ್ಲಿತ್ತು ಎಂದು ಇರಾನ್ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿದೆ.
"ಈ ಕ್ರಮವು ಸ್ನೇಹಪರ ಮತ್ತು ಸಹೋದರ ರಾಷ್ಟ್ರವಾದ ಖತರ್ ಮತ್ತು ಅದರ ಪ್ರಜೆಗಳಿಗೆ ಯಾವುದೇ ಅಪಾಯವನ್ನು ಒಡ್ಡುವುದಿಲ್ಲ. ಇಸ್ಲಾಮಿಕ್ ಗಣರಾಜ್ಯವಾದ ಇರಾನ್, ಖತಾರ್ನೊಂದಿಗೆ ಐತಿಹಾಸಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು, ಮತ್ತು ಅದನ್ನು ಮುಂದುವರಿಸಲು ಬದ್ಧವಾಗಿದೆ" ಎಂದು ಇರಾನ್ ಹೇಳಿಕೆಯಲ್ಲಿ ತಿಳಿಸಿದೆ.
ಈ ದಾಳಿಯನ್ನು ಖಂಡಿಸಿರುವ ಖತರ್, ಇದು ತನ್ನ ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.
Next Story





