ಹಾರ್ಮುಝ್ ಜಲಸಂಧಿಯಲ್ಲಿ ಎರಡು ಹಡಗು ವಶ ಪಡಿಸಿಕೊಂಡ ಇರಾನ್; ವೀಡಿಯೊ ಬಿಡುಗಡೆ ಮಾಡಿದ IRGC

Screengrab: X
ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ಅನಿರ್ದಿಷ್ಟವಾಗಿ ವಿಸ್ತರಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ನಂತರ, ಇರಾನ್ ಹಾರ್ಮುಝ್ ಜಲಸಂಧಿಯಲ್ಲಿ ಎರಡು ಹಡಗುಗಳನ್ನು ವಶಪಡಿಸಿಕೊಂಡಿದೆ.
ಬುಧವಾರ ಈ ಬಗ್ಗೆ ಮಾಹಿತಿ ನೀಡಿದ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ವಶಪಡಿಸಿಕೊಂಡ ಹಡಗುಗಳಲ್ಲಿ ಒಂದನ್ನು ಇಸ್ರೇಲ್ಗೆ ಸಂಬಂಧಿಸಿದೆ ಎಂದು ತಿಳಿಸಿದೆ. ಜಲಸಂಧಿಯಲ್ಲಿ ಹಿಡಿದ ಎರಡೂ ಹಡಗುಗಳನ್ನು ಇರಾನ್ ಕರಾವಳಿಯತ್ತ ಕೊಂಡೊಯ್ಯಲಾಗಿದೆ ಎಂದು ತಿಳಿಸಲಾಗಿದೆ.
ಅಮೆರಿಕ ಮತ್ತು ಇಸ್ರೇಲ್ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವವರೆಗೆ ಹಾರ್ಮುಝ್ ಜಲಸಂಧಿಯ ಮೇಲಿನ ತನ್ನ ನಿಯಂತ್ರಣ ಕ್ರಮಗಳನ್ನು ಹಿಂಪಡೆಯುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಈ ನಡುವೆ, ಹಾರ್ಮುಝ್ ಜಲಸಂಧಿಯಲ್ಲಿ ಕಂಟೇನರ್ ಹಡಗನ್ನು ಸೆರೆಹಿಡಿಯುತ್ತಿರುವ ದೃಶ್ಯಗಳ ವೀಡಿಯೊವನ್ನು ಇರಾನ್ ಬಿಡುಗಡೆ ಮಾಡಿದೆ. ವೀಡಿಯೊದಲ್ಲಿ ಶಸ್ತ್ರಸಜ್ಜಿತ ಹಾಗೂ ಮುಸುಕು ಧರಿಸಿದ ಇರಾನಿನ ಪಡೆಗಳು ಸರಕು ಹಡಗಿನ ಬದಿಯನ್ನು ಏರಿ ಹಡಗನ್ನು ವಶಪಡಿಸಿಕೊಳ್ಳುತ್ತಿರುವುದು ಕಾಣಿಸುತ್ತದೆ.
ಪರ್ಷಿಯನ್ ಕೊಲ್ಲಿಯ ಪ್ರಮುಖ ಸಾಗಣೆ ಮಾರ್ಗವಾದ ಹಾರ್ಮುಝ್ ಜಲಸಂಧಿಯಲ್ಲಿ ಈ ಬೆಳವಣಿಗೆ ನಡೆದಿರುವುದು ಜಾಗತಿಕ ತೈಲ ಹಾಗೂ ವಾಣಿಜ್ಯ ಸಾಗಣೆಗೆ ಪರಿಣಾಮ ಬೀರುವ ಸಾಧ್ಯತೆಯನ್ನು ಉಂಟುಮಾಡಿದೆ.
Iran has released footage showing IRGC forces using high-speed boats to intercept vessels that violated naval instructions, with elite units boarding the ships. pic.twitter.com/1Wuid2UYYM
— Nova HD (@NOVA_PressHD) April 22, 2026






