ಅಮೆರಿಕದ ಎರಡು ಡ್ರೋನ್ಗಳನ್ನು ಹೊಡೆದುರುಳಿಸಿದ ಇರಾನ್: ವರದಿ

ಸಾಂದರ್ಭಿಕ ಚಿತ್ರ | Photo Credit : AP
ಟೆಹರಾನ್: ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ (ಐಆರ್ಜಿಸಿ) ಇರಾನ್ನ ಬಂದರ್ ಖಮೀರ್ನ ಕರಾವಳಿ ಪ್ರದೇಶದಲ್ಲಿ ಅಮೆರಿಕದ ಎರಡು `ಲೂಕಾಸ್' ಡ್ರೋನ್ಗಳನ್ನು ಹೊಡೆದುರುಳಿಸಿದೆ ಎಂದು ಇರಾನ್ನ ತಸ್ನಿಮ್ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ.
ಸೋಮವಾರ ರಾತ್ರಿ ಐಆರ್ಜಿಸಿ ನೌಕಾಪಡೆಯು ಹಾರ್ಮುಝ್ ಜಲಸಂಧಿಯಲ್ಲಿ ಡ್ರೋನ್ ಒಂದನ್ನು ಧ್ವಂಸಗೊಳಿಸಿರುವುದಾಗಿ ಘೋಷಿಸಿತ್ತು. ಈ ಮಧ್ಯೆ, ಇರಾನ್ನ ಅನುಮತಿಯಿಲ್ಲದೆ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿದ್ದಾಗ ಸಮುದ್ರದಡಿಯ ಸ್ಫೋಟಕಕ್ಕೆ ಢಿಕ್ಕಿ ಹೊಡೆದು ಮೂರು ಟ್ಯಾಂಕರ್ಗಳು ಸ್ಫೋಟಗೊಂಡಿವೆ ಎಂದು ಐಆರ್ಜಿಸಿ ಮಂಗಳವಾರ ಹೇಳಿದೆ.
Next Story




