ವಿಶ್ವಾಸಾರ್ಹತೆ ವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಅಮೆರಿಕದ ಪ್ರತಿಕ್ರಿಯೆ ತಲುಪಿದೆ: ಇರಾನ್

ಅಬ್ಬಾಸ್ ಅರಾಘ್ಚಿ | Photo Credit : PTI
ಟೆಹರಾನ್, ಸೆ. 30: ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಮಂಗಳವಾರ ರಾತ್ರಿ ದೋಹಾದಲ್ಲಿ ಖತರ್ ಮಧ್ಯಸ್ಥಿಕೆದಾರರನ್ನು ಭೇಟಿಯಾಗಿದ್ದು, ಈ ವೇಳೆ ಇರಾನ್ ಪ್ರಸ್ತಾಪಿಸಿದ್ದ ಏಳು ದಿನಗಳ ವಿಶ್ವಾಸಾರ್ಹತೆ ವೃದ್ಧಿ ಯೋಜನೆಗೆ ಅಮೆರಿಕ ನೀಡಿದ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.
ಅರಾಘ್ಚಿ ಅವರು ಬುಧವಾರ ಟೆಹರಾನ್ ನಲ್ಲಿ ಅಮೆರಿಕದ ಪ್ರತಿಕ್ರಿಯೆ ಕುರಿತು ಚರ್ಚಿಸಲಿದ್ದಾರೆ ಎಂದು ವರದಿಯಾಗಿದೆ. ಒಪ್ಪಂದವನ್ನು ಫಲಪ್ರದಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಮತ್ತು ಇರಾನ್ ಜನರ ಹಕ್ಕುಗಳಿಗಾಗಿ ದೃಢವಾಗಿ ನಿಲ್ಲುವುದಾಗಿ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಹೇಳಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಐಆರ್ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ಪ್ರಸ್ತಾಪಿಸಿರುವ ಏಳು ದಿನಗಳ ಯೋಜನೆಯ ಪ್ರಮುಖ ಅಂಶಗಳಲ್ಲಿ ಹಾರ್ಮುಝ್ ಜಲಸಂಧಿಯನ್ನು ಪುನಃ ತೆರೆಯುವುದು ಮತ್ತು ಸಾಮಾನ್ಯ ಸಾಗರ ಸಂಚಾರವನ್ನು ಪುನಃಸ್ಥಾಪಿಸುವುದು ಸೇರಿದೆ.
Next Story




