ನೌಕಾ ದಿಗ್ಬಂಧನ ತೆರವುಗೊಳಿಸದಿದ್ದರೆ ಮಾತುಕತೆ ಇಲ್ಲ: ಇರಾನ್ ಪಟ್ಟು

ಸಾಂದರ್ಭಿಕ ಚಿತ್ರ | Photo Credit : AP
ಟೆಹರಾನ್, ಎ.19: ಅಮೆರಿಕದೊಂದಿಗೆ ಎರಡನೇ ಹಂತದ ಶಾಂತಿ ಮಾತುಕತೆಗಾಗಿ ಪಾಕಿಸ್ತಾನಕ್ಕೆ ನಿಯೋಗ ಕಳುಹಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲವೆಂದು ಇರಾನ್ ತಿಳಿಸಿದೆ.
ಹಾರ್ಮುಝ್ ಜಲಸಂಧಿಯಲ್ಲಿ ತನ್ನ ನೌಕೆಗಳ ಸಂಚಾರಕ್ಕೆ ಅಮೆರಿಕ ವಿಧಿಸಿರುವ ದಿಗ್ಬಂಧನ ತೆರವುಗೊಳ್ಳುವವರೆಗೆ ಮಾತುಕತೆ ನಡೆಯುವುದಿಲ್ಲ ಎಂದು IRGC ಪರವಾದ ತಾಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಮೆರಿಕ–ಇರಾನ್ ಮೊದಲ ಹಂತದ ಮಾತುಕತೆ ಮುರಿದು ಬಿದ್ದ ನಂತರವೂ ಪಾಕಿಸ್ತಾನ ಸಂಧಾನಕಾರನ ಪಾತ್ರ ವಹಿಸುತ್ತಿದ್ದು, ಎರಡೂ ದೇಶಗಳ ನಡುವೆ ಸಂದೇಶ ವಿನಿಮಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.
Next Story




