ಇರಾನ್ ಯುದ್ಧ | ಅಮೆರಿಕ ಕಳೆದುಕೊಂಡ ಯುದ್ಧ ವಿಮಾನಗಳೆಷ್ಟು?

ಸಾಂದರ್ಭಿಕ ಚಿತ್ರ | Photo Credit : AP , PTI
ಟೆಹ್ರಾನ್: ಇರಾನ್ ನಡೆಸುತ್ತಿರುವ ಪ್ರತಿದಾಳಿಯಿಂದಾಗಿ ಯುದ್ಧಾರಂಭದ ಬಳಿಕ ಇದುವರೆಗೆ ಅಮೆರಿಕ 16 ಯುದ್ಧವಿಮಾನಗಳನ್ನು ಕಳೆದುಕೊಂಡಿದೆ. ಇದರಲ್ಲಿ 10 ಎಂಕ್ಯೂ-9 ರೀಪರ್ ಡ್ರೋನ್ ಗಳೂ ಸೇರಿವೆ.
ದಾಳಿ ಹಾಗೂ ಕಾರ್ಯಾಚರಣೆ ವೇಳೆ ಇತರ ಹಲವು ವಿಮಾನಗಳಿಗೆ ಹಾನಿಯಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ಬಹುತೇಕ ವಿಮಾನಗಳು ಅಪಘಾತಗಳಿಂದ ನಾಶವಾಗಿವೆ ಎಂದು ಅಮೆರಿಕ ಹೇಳಿದೆ. ಮೂರು ಅಮೆರಿಕನ್ ಎಫ್-15 ಯುದ್ಧವಿಮಾನಗಳು ಕುವೈತ್ ನ ವಾಯುನೆಲೆಯಲ್ಲಿಯೇ ತಪ್ಪಾದ ದಾಳಿಯ ವೇಳೆ ನಾಶವಾಗಿದ್ದು, ವಾಯು ಕಾರ್ಯಾಚರಣೆ ಮಧ್ಯೆ ಕೆಸಿ-135 ಮರುಪೂರಣ ಟ್ಯಾಂಕರ್ ಗಳು ನಾಶವಾಗಿ, ವಿಮಾನದಲ್ಲಿದ್ದ ಆರು ಮಂದಿ ಜೀವ ಕಳೆದುಕೊಂಡಿದ್ದಾರೆ.
Next Story





