ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಿಲ್ಲಿಸದಿದ್ದಲ್ಲಿ ಕದನವಿರಾಮ ರದ್ದು: ಇರಾನ್ ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : gemini AI
ಟೆಹರಾನ್,ಎ.10: ಒಂದು ವೇಳೆ ಲೆಬನಾನ್ ಮೇಲೆ ಇಸ್ರೇಲ್ ದಾಳಿಗಳನ್ನು ಮುಂದುವರಿಸಿದಲ್ಲಿ ಇರಾನ್ ಎರಡು ವಾರಗಳ ಕದನವಿರಾಮದಿಂದ ಹಿಂದೆಸರಿಯಲಿದೆ ಎಂದು ಇರಾನ್ ತಾಸ್ನಿಮ್ ಸುದ್ದಿಸಂಸ್ಥೆ, ಅನಾಮಿಕ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಲೆಬನಾನ್ ವಿರುದ್ಧ ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ನ ಸಶಸ್ತ್ರ ಪಡೆಗಳು ಇಸ್ರೇಲ್ನಲ್ಲಿರುವ ಗುರಿಗಳನ್ನು ಗುರುತಿಸುತ್ತಿವೆ ಎಂದು ಎಂದು ಐಆರ್ಜಿಸಿ ಜೊತೆ ನಂಟು ಹೊಂದಿರುವ ಈ ಸುದ್ದಿಸಂಸ್ಥೆ ತಿಳಿಸಿದೆ. ಕದನವಿರಾಮ ಘೋಷಣೆಯ ಬಳಿಕವೂ ಲೆಬನಾನ್ನಲ್ಲಿ ಹಿಝ್ಬುಲ್ಲಾ ವಿರುದ್ಧ ದಾಳಿ ನಡೆಸಿದ್ದಕ್ಕಾಗಿ ಇಸ್ರೇಲನ್ನು ಇರಾನ್ ದಂಡಿಸಲಿದೆ ಎಂದು ಮೂಲವೊಂದು ತಿಳಿಸಿರುವುದಾಗಿ ಪ್ರೆಸ್ ಟಿವಿ ವರದಿ ಮಾಡಿದೆ.
Next Story




