ಪ್ರಚೋದನೆ ನೀಡಿದರೆ ಮತ್ತಷ್ಟು ಪ್ರತಿಕ್ರಿಯೆ: ಅಮೆರಿಕಕ್ಕೆ ಇರಾನ್ ನಿಂದ ಎಚ್ಚರಿಕೆ
► ಅಮೆರಿಕದ "ಹಿಟ್-ಅಂಡ್-ರನ್" ದಾಳಿಗಳ ಯುಗಾಂತ್ಯ ಎಂದ IRGC!

ಟೆಹರಾನ್: ಖತರ್ ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದನ್ನು ದೃಢಪಡಿರುವ ಇರಾನ್, ಈ ದಾಳಿಯನ್ನು ಇರಾನಿನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕದ ದಾಳಿಗೆ ಸ್ಪಷ್ಟ ಪ್ರತಿಕಾರ ಎಂದು ಹೇಳಿದೆ. ಒಂದು ವೇಳೆ ಅಮೆರಿಕವು ಪ್ರಚೋದನೆ ನೀಡಿದರೆ ಮತ್ತಷ್ಟು ಪ್ರತಿಕ್ರಿಯೆ ನೀಡುವುದಾಗಿ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಎಚ್ಚರಿಕೆ ನೀಡಿದೆ.
ಅಧಿಕೃತ ಸುದ್ದಿ ಸಂಸ್ಥೆ ತಸ್ನಿಮ್ ಗೆ ಈ ಕುರಿತು ಹೇಳಿಕೆ ನೀಡಿರುವ IRGCಯು, ದಾಳಿ ಮಾಡಿರುವ ಪ್ರದೇಶದಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳು ಈಗ ದುರ್ಬಲವಾಗಿದೆ ಎಂದು ಘೋಷಿಸಿದೆ.
ಇರಾನ್ ತನ್ನ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಅಥವಾ ರಾಷ್ಟ್ರೀಯ ಭದ್ರತೆಯ ವಿರುದ್ಧದ ಯಾವುದೇ ಆಕ್ರಮಣವನ್ನು ಎಂದಿಗೂ ಉತ್ತರಿಸದೇ ಬಿಡುವುದಿಲ್ಲ. ಈ ಕಾರ್ಯಾಚರಣೆಯನ್ನು ಇರಾನ್ ನ ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯೊಂದಿಗೆ ಸಂಯೋಜಿಸಲಾಗಿದೆ ಎಂದು ಹೇಳಿದೆ.
ಅಮೆರಿಕದ "ಹಿಟ್-ಅಂಡ್-ರನ್" ದಾಳಿಗಳ ಯುಗಾಂತ್ಯವನ್ನು ಇರಾನ್ ನಡೆಸಿರುವ ದಾಳಿಯು ಸೂಚಿಸಿದೆ. ಯಹೂದಿಗಳ ಘಟಕವನ್ನು(ಅಮೆರಿಕದ ನೆಲೆ) ಕಿತ್ತುಹಾಕುವವರೆಗೂ ನಿರಂತರ ಪ್ರತಿರೋಧ ಮಾಡಲಾಗುವುದು ಎಂದು ಇರಾನ್ ಪ್ರತಿಜ್ಞೆ ಮಾಡಿದೆ.ಅಮೆರಿಕದ "ಹಿಟ್-ಅಂಡ್-ರನ್" ದಾಳಿಗಳ ಯುಗಾಂತ್ಯ ಎಂದ IRGC







