ಅಮೆರಿಕದ ನಿರ್ಬಂಧಗಳನ್ನು ಎದುರಿಸುತ್ತೇವೆ: ಇರಾನ್

ಟೆಹರಾನ್: ಅಮೆರಿಕದ ಅನ್ಯಾಯದ ನಿರ್ಬಂಧಗಳು ಮತ್ತು ಷಡ್ಯಂತ್ರಗಳನ್ನು ಎದುರಿಸಿ ನಿಲ್ಲುವುದಾಗಿ ಇರಾನ್ ಸರಕಾರ ಶನಿವಾರ ಪ್ರತಿಜ್ಞೆ ಮಾಡಿದೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‍ನ ರಾಜತಾಂತ್ರಿಕತೆಯು ಗೌರವ, ವಿವೇಕ ಮತ್ತು ಸಮಯೋಚಿತತೆ ಎಂಬ ಮೂರು ತತ್ವಗಳ ಆಧಾರದ ಮೇಲೆ ಮುಂದುವರಿಯುತ್ತದೆ. ಇದರೊಂದಿಗೆ `ಅಮೆರಿಕ-ಇಸ್ರೇಲ್'ನ ಅಹಂಕಾರದ ಷಡ್ಯಂತ್ರಗಳು ಮತ್ತು ಅನ್ಯಾಯದ ನಿರ್ಬಂಧಗಳ ವಿರುದ್ಧ ದೃಢವಾಗಿ ನಿಲ್ಲುವುದಕ್ಕೆ ಒತ್ತು ನೀಡಲಾಗುವುದು. ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ರಕ್ಷಣೆ ಮತ್ತು ರಾಜತಾಂತ್ರಿಕತೆ ಎರಡೂ ಅವಿಭಾಜ್ಯ ಪ್ರಕ್ರಿಯೆಗಳಾಗಿದೆ ಎಂದು ಹೇಳಿಕೆ ತಿಳಿಸಿದೆ.
ಈ ಮಧ್ಯೆ `ರಾಜತಾಂತ್ರಿಕತೆಯನ್ನು ಮರಳಿ ಹಳಿಗೆ ತರುವುದು ಅಸಾಧ್ಯವೇನಲ್ಲ. ಅದು `ಒತ್ತಡ ಹೇರುವುದು ಕೆಲಸ ಮಾಡುವುದಿಲ್ಲ' ಎಂಬ ಸರಳ ಸತ್ಯವನ್ನು ಅಮೆರಿಕ ಅರ್ಥಮಾಡಿಕೊಳ್ಳುವುದರ ಮೇಲೆ ಆಧಾರಿತವಾಗಿದೆ' ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
Next Story




