ಜೂನ್ ನ ತಿಳುವಳಿಕಾ ಒಪ್ಪಂದಕ್ಕೆ ಅಮೆರಿಕ ಮರಳಿದಲ್ಲಿ ಇರಾನ್ ತಕ್ಷಣವೇ ಸ್ಪಂದಿಸಲಿದೆ: ಪೆಝೆಶ್ಕಿಯಾನ್

ಮಸೂದ್ ಪೆಝೆಶ್ಕಿಯಾನ್ | Photo Credit : ANI
ಬಿಶ್ಕೆಕ್, ಸೆ. 1: ಪಶ್ಚಿಮ ಏಶ್ಯ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಅಮೆರಿಕ ಹಾಗೂ ಇರಾನ್ ನಡುವೆ ಜೂನ್ ನಲ್ಲಿ ಏರ್ಪಟ್ಟ ತಿಳುವಳಿಕಾ ಒಪ್ಪಂದಕ್ಕೆ ಮರಳಿದಲ್ಲಿ ಅದಕ್ಕೆ ಇರಾನ್ ತಕ್ಷಣವೇ ಪ್ರತಿಸ್ಪಂದಿಸಲಿದೆಯೆಂದು ಇರಾನ್ ಅಧ್ಯಕ್ಷ ಮಸೂದ್ ಪೆಝೆಶ್ಕಿಯಾನ್ ಅವರು ತಿಳಿಸಿದ್ದಾರೆ. ಕಿರ್ಗಿಝ್ಸ್ತಾನದಲ್ಲಿ ಮಂಗಳವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಂದು ಇರಾನ್ ಅಧ್ಯಕ್ಷರ ಅಧಿಕೃತ ವೆಬ್ ಸೈಟ್ ತಿಳಿಸಿದೆ.
ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷದ ಬಳಿಕ ಉಭಯ ದೇಶಗಳ ನಡುವಿನ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದಿಂದ ಜೂನ್ನಲ್ಲಿ ಇರಾನ್ ಹಾಗೂ ಅಮೆರಿಕ ನಡುವೆ ತಿಳುವಳಿಕಾ ಒಪ್ಪಂದ ಏರ್ಪಟ್ಟಿತ್ತು. ಆದರೆ ಬಳಿಕ ಈ ಒಪ್ಪಂದ ಮುರಿದುಬಿದ್ದಿತ್ತು. ತಿಳುವಳಿಕಾ ಒಪ್ಪಂದದ ಉಲ್ಲಂಘನೆಗಾಗಿ ಎರಡೂ ದೇಶಗಳು ಪರಸ್ಪರರ ವಿರುದ್ಧ ದೋಷಾರೋಪ ಮಾಡಿದ್ದವು.
Next Story




