ಇರಾನಿನ ನರ್ಗೀಸ್ ಮುಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ

Photo:X/@NobelPrize
ಹೊಸದಿಲ್ಲಿ: ನಾರ್ವೆಯ ನೊಬೆಲ್ ಆಯ್ಕೆ ಸಮಿತಿಯು ಇರಾನಿನಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆಯ ವಿರುದ್ಧ ಮತ್ತು ಎಲ್ಲರಿಗೂ ಮಾನವ ಹಕ್ಕುಗಳು ಹಾಗೂ ಸ್ವಾತಂತ್ರ್ಯವನ್ನು ಉತ್ತೇಜಿಸಲು ಮಾಡಿದ ಹೋರಾಟಕ್ಕಾಗಿ ಮಾನವ ಹಕ್ಕುಗಳ ಕಾರ್ಯಕರ್ತೆ ನರ್ಗಿಸ್ ಮುಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಿದೆ.
ಈ ವರ್ಷದ ಶಾಂತಿ ಪ್ರಶಸ್ತಿಯು ಮಹಿಳೆಯರ ವಿರುದ್ಧ ತಾರತಮ್ಯ ಮತ್ತು ದಬ್ಬಾಳಿಕೆಯ ದೇವಪ್ರಭುತ್ವ ಆಡಳಿತದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದ ನೂರಾರು ಸಾವಿರಾರು ಜನರನ್ನೂ ಗುರುತಿಸಿದೆ ಎಂದು ಸಮಿತಿಯು ಹೇಳಿದೆ.
ಇರಾನ್ ಸರಕಾರವು ಮುಹಮ್ಮದಿ ಅವರನ್ನು 13 ಸಲ ಬಂಧಿಸಿದ್ದು, ನ್ಯಾಯಾಲಯಗಳು ಐದು ಬಾರಿ ಅವರನ್ನು ದೋಷಿ ಎಂದು ಘೋಷಿಸಿ ಒಟ್ಟು 31 ವರ್ಷಗಳ ಜೈಲು ವಾಸ ಮತ್ತು 154 ಚಾಟಿಯೇಟಿನ ಶಿಕ್ಷೆ ವಿಧಿಸಿವೆ. ಮುಹಮ್ಮದಿ ಈಗಲೂ ಜೈಲಿನಲ್ಲಿದ್ದಾರೆ.
Next Story







