ಕುವೈತ್ l ಅಮೆರಿಕದ ಸೇನಾ ನೆಲೆ ಮೇಲೆ ಇರಾನ್ ನಿಂದ ಡ್ರೋನ್ ದಾಳಿ
ಅಲಿ ಅಲ್-ಸಲೇಮ್ ವಾಯುನೆಲೆ ಗುರಿ: ಇರಾನ್ ಸೇನೆ ಹೇಳಿಕೆ

Photo: aa.com
ಟೆಹ್ರಾನ್: ಕುವೈತ್ ನಲ್ಲಿರುವ ಅಲಿ ಅಲ್-ಸಲೇಮ್ ವಾಯುನೆಲೆಯ ಮೇಲೆ ಇರಾನ್ ಸೇನೆ ಡ್ರೋನ್ ದಾಳಿ ನಡೆಸಿದೆ ಎಂದು ಇರಾನ್ ನ ಅಧಿಕೃತ ಸುದ್ದಿ ಸಂಸ್ಥೆ IRNA ವರದಿ ಮಾಡಿದೆ.
ಈ ವಾಯುನೆಲೆಯಲ್ಲಿರುವ ಅಮೆರಿಕದ ಡ್ರೋನ್ ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಇರಾನ್ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದಕ್ಕೂ ಮುನ್ನ ಕುವೈತ್ ಸೇನೆಯು ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಶತ್ರು ಡ್ರೋನ್ ದಾಳಿಗಳನ್ನು ಎದುರಿಸುತ್ತಿವೆ ಎಂದು ಹೇಳಿತ್ತು. ಆದರೆ, ಈ ಕುರಿತು ಹೆಚ್ಚಿನ ವಿವರಗಳನ್ನು ನೀಡಿರಲಿಲ್ಲ.
Next Story





