ಎಫ್ಬಿಐ ಮುಖ್ಯಸ್ಥ ಪಟೇಲ್ ಇ-ಮೇಲ್ಗೆ ಕನ್ನ ಹಾಕಿದ ಇರಾನ್ ಮೂಲದ ಹ್ಯಾಕರ್ಗಳು

ಕಾಶ್ ಪಟೇಲ್ | Photo Credit : AP , PTI
ವಾಶಿಂಗ್ಟನ್, ಮಾ.27: ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್(ಎಫ್ಬಿಐ) ನಿರ್ದೇಶಕ ಕಾಶ್ ಪಟೇಲ್ ಅವರ ವೈಯಕ್ತಿಕ ಇ-ಮೇಲ್ ಹ್ಯಾಕ್ ಮಾಡಿರುವುದಾಗಿ ಇರಾನ್ಗೆ ಸಂಬಂಧಿಸಿದ ಹ್ಯಾಕರ್ಗಳು ಪ್ರತಿಪಾದಿಸಿದ್ದು ಅವರ ಫೋಟೋಗಳು ಮತ್ತು ವೈಯಕ್ತಿಕ ವಿವರಗಳನ್ನು ಇಂಟರ್ನೆಟ್ನಲ್ಲಿ ಪ್ರಕಟಿಸಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
`ಹಂದಾಲಾ ಹ್ಯಾಕ್ ಟೀಂ' ಎಂದು ಗುರುತಿಸಲಾಗುವ ಗುಂಪು ತಮ್ಮ ವೆಬ್ಸೈಟ್ನಲ್ಲಿ `ಪಟೇಲ್ ಈಗ ಯಶಸ್ವಿಯಾಗಿ ಹ್ಯಾಕ್ ಮಾಡಲಾದ ಬಲಿಪಶುಗಳ ಪಟ್ಟಿಯಲ್ಲಿ ಅವರ ಹೆಸರನ್ನು ಕಂಡುಕೊಳ್ಳುತ್ತಾರೆ' ಎಂದು ಬರೆದುಕೊಂಡಿದೆ.
Next Story




