ಆರ್ಥಿಕ ಒತ್ತಡದಿಂದ ಅಮೆರಿಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ: ಇರಾನ್ ಅಧ್ಯಕ್ಷ ಪೆಜೆಶ್ಕಿಯನ್

ಮಸೌದ್ ಪೆಜೆಶ್ಕಿಯನ್ | Photo Credit : PTI
ಟೆಹರಾನ್, ಆ.26: ಅಮೆರಿಕ ಜಾರಿಗೆ ತಂದಿರುವ ಹೊಸ ಹಂತದ ಆರ್ಥಿಕ ನಿರ್ಬಂಧಗಳಿಂದ ಅಮೆರಿಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಬುಧವಾರ ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸರ್ಕಾರದ ಆರ್ಥಿಕ ವಲಯಗಳು ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಅಮೆರಿಕ ಈ ಹಂತದಲ್ಲೂ ಆರ್ಥಿಕ ಒತ್ತಡದ ಮೂಲಕ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಯುದ್ಧದಲ್ಲೂ ಅವರು ವಿಫಲವಾದಂತೆಯೇ ಇದು ಕೂಡ ಆಗಲಿದೆ. ಸಂವಾದ ಮತ್ತು ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಹರಿಸುವುದು ನಮ್ಮ ತತ್ವವಾಗಿದೆ. ಆದರೆ ಅದೇ ಸಮಯದಲ್ಲಿ, ನಾವು ಇದುವರೆಗೆ ನಿಂತಂತೆ ಮತ್ತು ಮುಂದೆಯೂ ಆರ್ಥಿಕ ಒತ್ತಡಗಳ ವಿರುದ್ಧ ದೃಢವಾಗಿ ನಿಲ್ಲುತ್ತೇವೆ ಎಂದು ಪೆಜೆಶ್ಕಿಯನ್ ಹೇಳಿದ್ದಾರೆ.
ಈ ಮಧ್ಯೆ, ಇರಾನ್ ಮತ್ತು ಒಮನ್ ಆಯಕಟ್ಟಿನ ಹಾರ್ಮುಝ್ ಜಲಸಂಧಿಯ ಮೂಲಕ ಜಂಟಿಯಾಗಿ ತಾತ್ಕಾಲಿಕ ಹಡಗು ಸಂಚಾರ ಮಾರ್ಗವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ರೂಪಿಸಿವೆ. ಎರಡೂ ದೇಶಗಳ ನಡುವೆ ವಾರಗಳ ಕಾಲ ನಡೆದ ಸುದೀರ್ಘ ಚರ್ಚೆಗಳ ನಂತರ ಈ ಬೆಳವಣಿಗೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




