ರಾಜೀನಾಮೆ ವದಂತಿ ನಿರಾಕರಿಸಿದ ಇರಾನ್ ಅಧ್ಯಕ್ಷ ಪೆಝೆಶ್ಕಿಯನ್

ಮಸೂದ್ ಪೆಜೆಷ್ಕಿಯನ್ | Photo Credit : PTI
ಟೆಹರಾನ್, ಆ.5: ಇರಾನ್ ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್ ತಮ್ಮ ರಾಜೀನಾಮೆ ವದಂತಿಯನ್ನು ನಿರಾಕರಿಸಿದ್ದು ತಾವು ರಾಜೀನಾಮೆ ನೀಡುವುದಿಲ್ಲ ಮತ್ತು ಅಧಿಕಾರದಲ್ಲೇ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ನಾನು ರಾಜೀನಾಮೆ ನೀಡುವ ಉದ್ದೇಶ ಹೊಂದಿದ್ದರೆ, ಅದನ್ನು ಅಧಿಕೃತವಾಗಿ ಘೋಷಿಸುತ್ತಿದ್ದೆ. ನಾನು ರಾಜೀನಾಮೆ ನೀಡುವುದಿಲ್ಲ. ನಾನು ಗಟ್ಟಿಯಾಗಿ ನಿಲ್ಲುತ್ತೇನೆ. ಸರಕಾರದೊಳಗೆ ವಿಭಜನೆ ಸೃಷ್ಟಿಸಲು ತಮ್ಮ ರಾಜೀನಾಮೆ ಕುರಿತ ವದಂತಿಗಳನ್ನು ಹರಡಲಾಗುತ್ತಿದೆ ಎಂದು ಪೆಝೆಶ್ಕಿಯನ್ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಇರಾನ್ನ ನಾಯಕತ್ವದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಪ್ರತಿಪಾದನೆಗಳನ್ನು ಅಧ್ಯಕ್ಷರು ತಿರಸ್ಕರಿಸಿದ್ದು, ತಮ್ಮ ಸರಕಾರ, ಸಶಸ್ತ್ರ ಪಡೆಗಳು ಮತ್ತು ಸರ್ವೋಚ್ಛ ನಾಯಕ ಮೊಜ್ತಬಾ ಖಾಮಿನೈ ಅವರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವು ಸಂಪೂರ್ಣ ಸಾಮರಸ್ಯದಿಂದ ಕೆಲಸ ಮಾಡುತ್ತಿದ್ದೇವೆ' ಎಂದು ಹೇಳಿದ್ದಾರೆ.
Next Story




