ಇಸ್ರೇಲ್ ಸೇನೆ, ಗುಪ್ತಚರ ಕೇಂದ್ರಗಳನ್ನು ಗುರಿಯಾಗಿಸಿ ಇರಾನ್ನಿಂದ ದಾಳಿ: ವರದಿ

File Photo: PTI
ಟೆಹರಾನ್ : ಇರಾನ್ ಗುರುವಾರ ಇಸ್ರೇಲ್ ಸೇನೆ, ಗುಪ್ತಚರ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಇರಾನ್ನ IRNA ಸುದ್ದಿಸಂಸ್ಥೆ ವರದಿ ಮಾಡಿದೆ.
ಇಸ್ರೇಲ್ ಸೇನೆ, ಇಂಟೆಲಿಜೆನ್ಸ್ ಪ್ರಧಾನ ಕಚೇರಿ ಮತ್ತು ಗವ್-ಯಾಮ್ ಟೆಕ್ನಾಲಜಿ ಪಾರ್ಕ್ನಲ್ಲಿರುವ ಮಿಲಿಟರಿ ಶಿಬಿರವನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸಿದೆ ಎಂದು ವರದಿಯು ತಿಳಿಸಿದೆ.
ಬೀರ್ಶೇವಾದ ಸೊರೊಕಾ ಆಸ್ಪತ್ರೆಯ ಮೇಲೆ ಇರಾನ್ ಕ್ಷಿಪಣಿ ಅಪ್ಪಳಿಸಿದೆ ಎಂದು ವರದಿಯಾಗಿತ್ತು. ಕ್ಷಿಪಣಿ ದಾಳಿ ವೇಳೆ ನಡೆದ ಆಘಾತ ತರಂಗದಿಂದ ಆಸ್ಪತ್ರೆಗೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಮಿಲಿಟರಿ ಕೇಂದ್ರವು ಇರಾನ್ನ ಗುರಿಯಾಗಿತ್ತು ಎಂದು ಐಆರ್ಎನ್ಎ ಹೇಳಿದೆ.
Next Story





