ಇರಾನ್ ಆಡಳಿತ ವಿರುದ್ಧ ಫೆ.14ರಂದು ವಿಶ್ವದಾದ್ಯಂತ ಪ್ರತಿಭಟನೆಗೆ ರೆಝಾ ಪಹ್ಲವಿ ಕರೆ

Photo: Unsplash
ಟೆಹರಾನ್, ಫೆ.3: ಇರಾನ್ ನಲ್ಲಿ ವ್ಯಾಪಕವಾಗಿರುವ ಪ್ರಜಾಪ್ರಭುತ್ವ ಪರ ಚಳವಳಿಯನ್ನು ಬೆಂಬಲಿಸಿ ಫೆಬ್ರವರಿ 14ರಂದು ಜಾಗತಿಕವಾಗಿ ಇರಾನ್ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವಂತೆ ಇರಾನ್ ನ ಪದಚ್ಯುತ ದೊರೆ ದಿವಂಗತ ಶಾ ಮೊಹಮ್ಮದ್ ರೆಝಾ ಪಹ್ಲವಿ ಅವರ ಪುತ್ರ ರೆಝಾ ಪಹ್ಲವಿ ಅವರು ಮಂಗಳವಾರ ಕರೆ ನೀಡಿದ್ದಾರೆ.
ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿ ನೆಲೆಸಿರುವ ಇರಾನಿ ಜನತೆ ರಸ್ತೆಗಿಳಿಯುವಂತೆ ಅವರು ಕರೆ ನೀಡಿದ್ದಾರೆ. ‘ಸೂರ್ಯ ಮತ್ತು ಸಿಂಹ’ದ (ಶಾ ರಾಜಪ್ರಭುತ್ವ ಕಾಲದ ಇರಾನ್ ನ ರಾಷ್ಟ್ರೀಯ ಚಿಹ್ನೆ) ಕ್ರಾಂತಿಯ ಜೊತೆ ಏಕತೆಯನ್ನು ಸಾರುವ ಜಾಗತಿಕ ಕ್ರಿಯಾ ದಿನವಾಗಿರುವುದೆಂದು ಅವರು ಅಮೆರಿಕದಲ್ಲಿ ನೆಲೆಸಿರುವ ಶಾ ಅವರು ಬಣ್ಣಿಸಿದ್ದಾರೆ.
ಜರ್ಮನಿಯ ಮ್ಯೂನಿಕ್, ಅಮೆರಿಕದ ಲಾಸ್ ಏಂಜಲೀಸ್ ಹಾಗೂ ಕೆನಡದ ಟೊರಾಂಟೊ ನಗರಗಳು ಪ್ರಮುಖ ಪ್ರತಿಭಟನಾ ಕೇಂದ್ರಗಳಾಗಿವೆ ಎಂದು ತಿಳಿಸಿದ್ದಾರೆ.
Next Story





