ಮಸ್ಕ್ ಅವರ ಸ್ಟಾರ್ ಲಿಂಕ್ ಇಂಟರ್ ನೆಟ್ ಸೇವೆ ನಿಷೇಧಿಸುವ ಕಾನೂನಿಗೆ ಇರಾನ್ ಸಂಸತ್ತು ಅಂಗೀಕಾರ

ಎಲಾನ್ ಮಸ್ಕ್ (Photo: PTI)
ಟೆಹ್ರಾನ್: ಎಲಾನ್ ಮಸ್ಕ್ ಮಾಲಕತ್ವದ ಸ್ಟಾರ್ ಲಿಂಕ್ ಉಪಗ್ರಹ ಆಧಾರಿತ ಇಂಟರ್ ನೆಟ್ ಸೇವೆಯನ್ನು ದೇಶದಲ್ಲಿ ನಿಷೇಧಿಸುವ ಕಾನೂನನ್ನು ಇರಾನ್ ನ ಸಂಸತ್ತು ಜಾರಿಗೆ ತಂದಿದೆ.
ಸ್ಟಾರ್ ಲಿಂಕ್ ಇಂಟರ್ ನೆಟ್ ಬಳಕೆ ಕ್ರಿಮಿನಲ್ ಅಪರಾಧ ಎಂದು ಕಾನೂನಿನಲ್ಲಿ ಉಲ್ಲೇಖಿಸಿದ್ದು ಈ ಅಪರಾಧಕ್ಕೆ ದಂಡ ಮತ್ತು 2 ವರ್ಷದವರೆಗೆ ಜೈಲುಶಿಕ್ಷೆಗೆ ಅವಕಾಶವಿದೆ. ಸರಕಾರದ ಸೆನ್ಸಾರ್ ಶಿಪ್ ನಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ತಡೆಯುವ ಉದ್ದೇಶದಿಂದ ಈ ಕಾನೂನು ಜಾರಿಗೆ ಬಂದಿರುವುದಾಗಿ ವರದಿಯಾಗಿದೆ. ಮಾಹಿತಿ ವಲಯದ ಮೇಲೆ ನಿಯಂತ್ರಣ ಸಾಧಿಸಲು ಮತ್ತು ಸೆನ್ಸಾರ್ ಮಾಡದ ಇಂಟರ್ ನೆಟ್ ಸೇವೆಗೆ ಪ್ರವೇಶ ನಿಯಂತ್ರಿಸಲು ಇರಾನ್ ಬಯಸಿದೆ. ಈ ಮಧ್ಯೆ, ಸ್ಟಾರ್ ಲಿಂಕ್ ಸರಕಾರದ ನಿರ್ಬಂಧಗಳಿಂದ, ವೆಬ್ಸೈಟ್ ಪ್ರತಿಬಂಧ ಮತ್ತು ಸೆನ್ಸಾರ್ ಶಿಪ್ ನಿಂದ ನುಣುಚಿಕೊಳ್ಳಲು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿದೆ. ಇರಾನಿನ ಹಲವಾರು ನಾಗರಿಕರು ಸ್ಟಾರ್ ಲಿಂಕ್ ಇಂಟರ್ ನೆಟ್ ಸೇವೆಯನ್ನು ಆಶ್ರಯಿಸಿದ್ದಾರೆ.
Next Story





