"ನೆರೆಯ ರಾಷ್ಟ್ರಗಳ ಮೇಲೆ ಇರಾನ್ ನೇರ ದಾಳಿ ಮಾಡುವುದಿಲ್ಲ": ಗಲ್ಫ್ ದೇಶಗಳ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ (Photo: X/@drpezeshkian)
“ನೆರೆಯ ದೇಶಗಳು ಇರಾನ್ ಮೇಲೆ ದಾಳಿ ಮಾಡಿದರೆ ಬಿಡುವುದಿಲ್ಲ”
ಟೆಹ್ರಾನ್: ನೆರೆಯ ರಾಷ್ಟ್ರಗಳಿಂದ ನೇರವಾಗಿ ಇರಾನ್ ಮೇಲ್ ದಾಳಿಯಾಗದ ಹೊರತು, ಆ ರಾಷ್ಟ್ರಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಿಲ್ಲ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ ಎಂದು aljazeera.com ವರದಿ ಮಾಡಿದೆ.
ಇಂತಹ ನಿಲುವಿಗೆ ಇರಾನ್ ನ ಮಧ್ಯಂತರ ನಾಯಕತ್ವ ಮಂಡಳಿ ನಿನ್ನೆ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಡೆದ ದಾಳಿಗಳ ಹಿನ್ನೆಲೆಯಲ್ಲಿ ನೆರೆಯ ರಾಷ್ಟ್ರಗಳಿಗೆ ಉಂಟಾದ ಆತಂಕಕ್ಕೆ, ಅವರಿಗುಂಟಾದ ಅನಾನುಕೂಲದ ಬಗ್ಗೆ ಅಧ್ಯಕ್ಷರು ಕ್ಷಮೆಯಾಚಿಸಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ.
Next Story





