ಇರಾಕ್| ಅಮೆರಿಕದ ರಾಜತಾಂತ್ರಿಕ ತಾಣಗಳ ಮೇಲೆ ಇರಾನ್ ಪರ ಗುಂಪಿನಿಂದ ದಾಳಿ

ಸಾಂದರ್ಭಿಕ ಚಿತ್ರ | Photo Credit : AP
ಬಗ್ದಾದ್, ಎ.5: ಇರಾಕ್ನಲ್ಲಿರುವ ಅಮೆರಿಕದ ರಾಜತಾಂತ್ರಿಕ ತಾಣಗಳ ಮೇಲೆ ಶನಿವಾರ ರಾತ್ರಿ ಇರಾನ್ ಪರ ಗುಂಪು ದಾಳಿ ನಡೆಸಿರುವುದಾಗಿ ಬಗ್ದಾದ್ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ರವಿವಾರ ಹೇಳಿದೆ.
`ಇರಾನ್ ಜೊತೆ ಗುರುತಿಸಿಕೊಂಡಿರುವ ಇರಾಕ್ನ ಸಶಸ್ತ್ರ ಭಯೋತ್ಪಾದಕರ ಗುಂಪು ಅಮೆರಿಕದ ರಾಜತಾಂತ್ರಿಕರನ್ನು ಕೊಲ್ಲುವ ಪ್ರಯತ್ನದಲ್ಲಿ ಶನಿವಾರ ರಾತ್ರಿ ಅಮೆರಿಕ ರಾಜತಾಂತ್ರಿಕ ತಾಣಗಳ ಮೇಲೆ ಭೀಕರ ದಾಳಿ ನಡೆಸಿದೆ ಎಂದು ರಾಯಭಾರ ಕಚೇರಿಯ ವಕ್ತಾರರು ಹೇಳಿದ್ದಾರೆ.
ಇರಾನ್ ಯುದ್ಧಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಗಳು:
ಇಸ್ರೇಲ್ನ ಪೆಟಾಹ್ ಟಿಕ್ವ ನಗರದಲ್ಲಿನ ಡ್ರೋನ್ ಉತ್ಪಾದನಾ ಕೈಗಾರಿಕೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು ಕಾರ್ಖಾನೆಗೆ ತೀವ್ರ ಹಾನಿಯಾಗಿದೆ. ಕಾರ್ಖಾನೆಯ ಕಾರ್ಯಾಚರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು ಕಾರ್ಖಾನೆಯನ್ನು ದುರಸ್ತಿಪಡಿಸುವುದು ಬಹುತೇಕ ಅಸಾಧ್ಯ ಎಂದು ಮೂಲಗಳನ್ನು ಉಲ್ಲೇಖಿಸಿ ಇಸ್ರೇಲ್ನ ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕದ ಯಾವುದೇ ಮುಂದಿನ ಕ್ರಮವು ಜಾಗತಿಕ ವ್ಯಾಪಾರ ಮತ್ತು ಇಂಧನದ ಹರಿವನ್ನು ಅಡ್ಡಿಪಡಿಸಬಹುದು. ಹಾರ್ಮುಜ್ನಂತೆ ಬಾಬ್-ಎಲ್-ಮಂಡೆಬ್ ಜಲಸಂಧಿಯನ್ನೂ ಇರಾನ್ ಗುರಿಯಾಗಿಸಬಹುದು ಎಂದು ಇರಾನ್ನ ಸರ್ವೋಚ್ಛ ನಾಯಕರ ಸಲಹೆಗಾರ ಅಲಿಯಕ್ಬರ್ ವೆಲಾಯಟಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ(ಎಪ್ರಿಲ್ 6)ರಂದು ಇರಾನ್ ಜೊತೆ ಒಪ್ಪಂದದ ಉತ್ತಮ ಅವಕಾಶವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಗಲ್ಫ್ನಾದ್ಯಂತ ಇಂಧನ ಮೂಲಸೌಕರ್ಯಗಳ ಮೇಲೆ ಇರಾನ್ ದಾಳಿ
ಲೆಬನಾನ್ ಕರಾವಳಿ ಬಳಿ ಇಸ್ರೇಲ್ನ ಯುದ್ಧನೌಕೆಯ ಮೇಲೆ ಕ್ರೂಸ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ.







