ಇರಾಕ್: ಸೇತುವೆ ಕುಸಿತದಲ್ಲಿ ಇಬ್ಬರು ಮೃತ್ಯು

ಬಗ್ದಾದ್, ಸೆ.7: ದಕ್ಷಿಣ ಇರಾಕಿನಲ್ಲಿ ನಿರ್ಮಾಣ ಹಂತದ ಸೇತುವೆಯೊಂದು ಕುಸಿದುಬಿದ್ದು ಕನಿಷ್ಠ ಇಬ್ಬರು ಸಾವನ್ನಪ್ಪಿರುವುದಾಗಿ ಸ್ಥಳೀಯ ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಕರ್ಬಾಲ-ಬಗ್ದಾದ್ ರಸ್ತೆಯ ಮೇಲ್ಸೇತುವೆಯ ಕಂಬಗಳು ಶನಿವಾರ ಕುಸಿದುಬಿದ್ದಿದ್ದು ದುರಂತದಲ್ಲಿ ಹಲವರು ಗಾಯಗೊಂಡಿದ್ದಾರೆ. ಸೇತುವೆಯ ಅವಶೇಷಗಳಡಿ ಸಿಲುಕಿಕೊಂಡಿದ್ದ ವಾಹನಗಳಿದ್ದವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದ್ದು ಇದುವರೆಗೆ 7 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story





