ಹಾರ್ಮುಝ್ ನಲ್ಲಿ ಅಮೆರಿಕದ ಮಾನವರಹಿತ ನೌಕೆ ಮೇಲೆ IRGC ದಾಳಿ : ಒಮಾನ್ ನಲ್ಲಿ ಎರಡು ಹಡಗುಗಳಿಗೆ ಅಪ್ಪಳಿಸಿದ ಕ್ಷಿಪಣಿಗಳು

ಸಾಂದರ್ಭಿಕ ಚಿತ್ರ | Photo Credit : PTI
ದುಬೈ: ಹಾರ್ಮುಝ್ ಜಲಸಂಧಿಯ ಪ್ರವೇಶದ್ವಾರದ ಬಳಿ ಅಮೆರಿಕ ನಿರ್ವಹಿಸುತ್ತಿದ್ದ ‘ಸೇಲ್ಡ್ರೋನ್’ ಮಾದರಿಯ ಮಾನವರಹಿತ ಮೇಲ್ಮೈ ನೌಕೆಯ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಶುಕ್ರವಾರ ತಿಳಿಸಿದೆ.
ಹಾಯಿದೋಣಿ ಆಕಾರ ಹೊಂದಿರುವ ಈ ಮಾನವರಹಿತ ನೌಕೆಯ ಮೂಲಕ ನಡೆಯುತ್ತಿದ್ದ ‘ಆಕ್ರಮಣಕಾರಿ ಕಾರ್ಯಾಚರಣೆಯನ್ನು ವಿಫಲಗೊಳಿಸಲಾಗಿದೆ’ ಎಂದು IRGC ಹೇಳಿದೆ. ನೌಕೆಯನ್ನು ವಶಪಡಿಸಿಕೊಂಡಿರುವುದಾಗಿಯೂ ಇರಾನ್ ಹೇಳಿಕೊಂಡಿದೆ.
ಇರಾನ್ನ ಈ ಹೇಳಿಕೆಗೆ ಅಮೆರಿಕದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದೇ ವೇಳೆ, ಒಮಾನ್ ಕರಾವಳಿಯ ಸಮೀಪ ಎರಡು ಹಡಗುಗಳಿಗೆ ಕ್ಷಿಪಣಿಗಳು ಅಪ್ಪಳಿಸಿರುವ ಬಗ್ಗೆ ವರದಿಯಾಗಿದೆ ಎಂದು ಯುನೈಟೆಡ್ ಕಿಂಗ್ಡಮ್ನ ಕಡಲ ವ್ಯಾಪಾರ ಕಾರ್ಯಾಚರಣೆ ಕೇಂದ್ರ(UKMTO) ತಿಳಿಸಿದೆ.
Next Story




