ದಾಳಿ ಮರುಕಳಿಸಿದರೆ ಐತಿಹಾಸಿಕ ಪಾಠ ಕಲಿಸುತ್ತೇವೆ: ಅಮೆರಿಕಕ್ಕೆ IRGC ಎಚ್ಚರಿಕೆ

Photo : khamenei.ir
ಟೆಹ್ರಾನ್: ಇರಾನಿನ ವಿರುದ್ಧದ ದಾಳಿ ಮರುಕಳಿಸಿದರೆ ಅಮೆರಿಕಕ್ಕೆ ಐತಿಹಾಸಿಕ ಪಾಠ ಕಲಿಸುವುದಾಗಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(ಐಆರ್ಜಿಸಿ)ಯ ಮುಖ್ಯ ಕಮಾಂಡರ್ ಮೇ| ಜ| ಮುಹಮ್ಮದ್ ಪಕ್ಪೋರ್ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಖತರ್ ಮತ್ತು ಇರಾಕ್ ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಸೋಮವಾರ ರಾತ್ರಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. `ಅಮೆರಿಕಕ್ಕೆ ನಮ್ಮ ಸಂದೇಶ ಸ್ಪಷ್ಟವಾಗಿದೆ. ಸರ್ವಶಕ್ತನಾದ ದೇವರನ್ನು ಅವಲಂಬಿಸಿ ಮತ್ತು ಇರಾನಿನ ಜನರ ಬೆಂಬಲದಿಂದ ಇರಾನ್ ರಾಷ್ಟ್ರವು ಯಾವುದೇ ಸಂದರ್ಭದಲ್ಲೂ ತನ್ನ ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಗೆ ಸೂಕ್ತ ಉತ್ತರ ನೀಡದೆ ಬಿಡುವುದಿಲ್ಲ' ಎಂದು ಅವರು ಹೇಳಿದ್ದಾರೆ.
Next Story