ಬಾಜಿ ಕಟ್ಟುವ ಅಪ್ಲಿಕೇಶನ್ ರಚಿಸುತ್ತಿದೆಯೇ META? ಭವಿಷ್ಯವಾಣಿ ಹೇಳುವ ಮಾರುಕಟ್ಟೆ ಆ್ಯಪ್ ತಯಾರಿಗೆ ಸಿದ್ಧತೆ

meta(logo) , ಮಾರ್ಕ್ ಝುಕರ್ಬರ್ಗ್(AP , PTI)
2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಭವಿಷ್ಯವಾಣಿ ಮಾರುಕಟ್ಟೆಗಳು ಜನಪ್ರಿಯತೆ ಗಳಿಸಿದ್ದವು. ಹಣಕಾಸು ನೀತಿಯಿಂದ ಕ್ರೀಡಾ ಪಂದ್ಯಾವಳಿಗಳವರೆಗೆ ವಿವಿಧ ಕಾರ್ಯಕ್ರಮಗಳ ಮೇಲೆ ಪಣತೊಡಲು ಅನುವು ಮಾಡಿಕೊಡುವ ಆಸ್ತಿ ವರ್ಗವಾಗಿ ಅವು ಬೆಳೆದಿವೆ.
META ರಾಜಕೀಯದಲ್ಲಿ ಬಾಜಿ ಕಟ್ಟುವ ಉದ್ಯಮ ಪ್ರವೇಶಿಸಲು ಬಯಸುತ್ತಿದೆಯೇ? ಹೌದು ಎನ್ನುತ್ತಿವೆ ಇತ್ತೀಚಿನ ವರದಿಗಳು. META ಸಿಇಒ ಮಾರ್ಕ್ ಝುಕರ್ಬರ್ಗ್ ಇತ್ತೀಚೆಗೆ ಪಾಲಿಮಾರ್ಕೆಟ್ ಮತ್ತು ಕಲ್ಶಿಯಂತಹ ಅಪ್ಲಿಕೇಶನ್ ಅಭಿವೃದ್ಧಿಪಡಿಸಲು ತಮ್ಮ ಕಂಪೆನಿಯ ಸಣ್ಣ ತಂಡವೊಂದನ್ನು ನೇಮಿಸಿದ್ದಾರೆ ಎಂದು ವಿಷಯದ ಬಗ್ಗೆ ಮಾಹಿತಿ ಹೊಂದಿರುವ ಇಬ್ಬರು ಉದ್ಯೋಗಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ META ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ META ಅಭಿವೃದ್ಧಿಪಡಿಸುವ ಅಪ್ಲಿಕೇಶನ್ ನೇರವಾಗಿ ಹಣದ ಬಾಜಿ ಕಟ್ಟುವ ರೀತಿಯಲ್ಲಿ ವಿನ್ಯಾಸಗೊಳ್ಳುವ ಸಾಧ್ಯತೆ ಇಲ್ಲ. ಬದಲಾಗಿ, ವೀಡಿಯೊ ಗೇಮ್ ನಂತಹ ಪಾಯಿಂಟ್ ವ್ಯವಸ್ಥೆಯನ್ನು ಬಳಸುವ ಸಾಧ್ಯತೆ ಇದೆ. ಆದರೆ ಕಾಲಕ್ರಮೇಣ ಕಂಪೆನಿ ಅದನ್ನು ಹಣದ ಬಾಜಿ ಕಟ್ಟುವ ಮಾದರಿಯ ಅಪ್ಲಿಕೇಶನ್ ಆಗಿ ಪರಿವರ್ತಿಸುವ ಅವಕಾಶವನ್ನು ಉಳಿಸಿಕೊಳ್ಳಬಹುದು.
2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಭವಿಷ್ಯವಾಣಿ ಮಾರುಕಟ್ಟೆಗಳು ಜನಪ್ರಿಯತೆ ಗಳಿಸಿದ್ದವು. ಹೂಡಿಕೆದಾರರು ಹಣಕಾಸು ನೀತಿಯಿಂದ ಕ್ರೀಡಾ ಪಂದ್ಯಾವಳಿಗಳವರೆಗೆ ವಿವಿಧ ಕಾರ್ಯಕ್ರಮಗಳ ಮೇಲೆ ಪಣತೊಡಲು ಅನುವು ಮಾಡಿಕೊಡುವ ಆಸ್ತಿ ವರ್ಗವಾಗಿ ಅವು ಬೆಳೆದಿವೆ. ರಾಬಿನ್ಹುಡ್ ಮತ್ತು ಇಂಟರಾಕ್ಟಿವ್ ಬ್ರೋಕರ್ಸ್ಗಳಂತಹ ವೇದಿಕೆಗಳು ಇವೆಂಟ್ ಒಪ್ಪಂದಗಳನ್ನೂ ರೂಪಿಸಿವೆ.
META ನಿರ್ಮಿಸಲಿರುವ ಅಪ್ಲಿಕೇಶನ್ಗೆ "ಅರೆನಾ" ಎಂದು ಹೆಸರಿಡುವ ಸಾಧ್ಯತೆ ಇದೆ. ಆದರೆ METAದ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್ಗಳಿಗೂ ಈ ಹೊಸ ಅಪ್ಲಿಕೇಶನ್ಗೂ ಯಾವುದೇ ಸಂಬಂಧ ಇರುವುದಿಲ್ಲ. ಹೊಸ ಅಪ್ಲಿಕೇಶನ್ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ.






