ಬಾಹ್ಯಾಕಾಶದಲ್ಲಿ ಮೊದಲ ಖಾಸಗಿ ನಡಿಗೆ | ದಾಖಲೆ ಬರೆದ ಐಸಾಕ್ಮನ್
PC : X
ನ್ಯೂಯಾರ್ಕ್ : ತಂತ್ರಜ್ಞಾನ ಉದ್ಯಮಿ ಜೇರೆಡ್ ಐಸಾಕ್ಮನ್ ಬಾಹ್ಯಾಕಾಶದಲ್ಲಿ ಮೊದಲ ಖಾಸಗಿ ನಡಿಗೆ ನಡೆಸಿದ ಗಗನಯಾತ್ರಿ ಎಂಬ ದಾಖಲೆ ಬರೆದಿದ್ದಾರೆ.
ಕಳೆದ ವಾರ ಜೇರೆಡ್ ಐಸಾಕ್ಮನ್ ಜತೆ ಸ್ಪೇಸ್ಎಕ್ಸ್ನ ಇಬ್ಬರು ಇಂಜಿನಿಯರ್ಗಳು ಹಾಗೂ ವಾಯುಪಡೆಯ ಮಾಜಿ ಪೈಲಟ್ಗಳನ್ನು ಹೊತ್ತ ಸ್ಪೇಸ್ಎಕ್ಸ್ನ ಫಾಲ್ಕನ್ 9 ರಾಕೆಟ್ ಫ್ಲೋರಿಡಾದ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಉಡಾವಣೆಗೊಂಡಿತ್ತು.
ಈ ಐತಿಹಾಸಿಕ ಘಟನೆ ಕೇವಲ ತಾಂತ್ರಿಕ ಮೈಲುಗಲ್ಲು ಮಾತ್ರವಲ್ಲ, ಬಾಹ್ಯಾಕಾಶ ಪರಿಶೋಧನೆಯಲ್ಲಿ ಖಾಸಗಿ ಉದ್ಯಮಗಳ ಬೆಳೆಯುತ್ತಿರುವ ಪಾತ್ರವನ್ನು ಗುರುತಿಸುತ್ತದೆ. ಹೊಸ ಸ್ಪೇಸ್ಸೂಟ್ನ ಬಾಳಿಕೆ ಪರೀಕ್ಷಿಸಲು ಜೇರೆಡ್ ತನ್ನ ಕೈ ಅಥವಾ ಕಾಲುಗಳನ್ನು ಬಗ್ಗಿಸಲು ಅನುಮತಿಸಲಾಗಿತ್ತು. ಆದರೆ ಸುಮಾರು 2 ಗಂಟೆ ನಡೆದ ನಡಿಗೆಯಲ್ಲಿ ಬಹುತೇಕ ಸಮಯ ಅವರು ಗಗನ ನೌಕೆಯಿಂದ ತನ್ನ ಕೈಯನ್ನು ತೆಗೆಯಲೇ ಇಲ್ಲ ಎಂದು ವರದಿಯಾಗಿದೆ. ಬಾಹ್ಯಾಕಾಶ ನಡಿಗೆ ಯೋಜನೆಯ ವೆಚ್ಚವನ್ನು ಐಸಾಕ್ಮನ್ ಅವರು ಸ್ಪೇಸ್ಎಕ್ಸ್ ಜತೆ ಹಂಚಿಕೊಂಡಿದ್ದಾರೆ.
Next Story